ಶೂನ್ಯದ ಒಡಲು

Author : ಗುರುಲಿಂಗ ಶಿವಾಚಾರ್ಯರು

Pages 84

₹ 80.00




Year of Publication: 2016
Published by: ಕಳ್ಳಿಮಠ ಪ್ರಕಾಶನ
Address: ಮಹಾಗಾoವ, ಜಿಲ್ಲೆ: ಕಲಬುರಗಿ

Synopsys

ಲೇಖಕ ಮಹಾಗಾಂವ್ ಕಳ್ಳಿಮಠದ ಶ್ರೀ ಗುರುಲಿಂಗ ಶಿವಾಚಾರ್ಯರು ಬರೆದ ಕೃತಿ-ಶೂನ್ಯದ ಒಡಲು. ಇದು ಅವರು ಬರೆದ ವಚನಗಳ ಸಂಕಲನ. ಒಟ್ಟು, 191 ವಚನಗಳಿವೆ. ವಿವಿಧ ಸಂದರ್ಭಗಳಲ್ಲಿ ಬರೆದ ಅನುಭವಗಳ ಮೊತ್ತವಾಗಿ ಈ ವಚನಗಳು ರೂಪುಗೊಂಡಿವೆ. ಯೋಗ -ಶಿವಯೋಗವೂ ವಚನಗಳ ಪ್ರಮುಖ ಅಂಶಗಳು. ಭಾವ ಮಾತಿನಲ್ಲಿ ಅಡಗಿದರೆ ಮಾತು ಮಂತ್ರಗಳಲ್ಲಿ ನೆಲೆಯಾಗಬೇಕು. ಮಂತ್ರವನ್ನು ದಾಟಿಸುವ ಸನ್ನಿಧಿಗೆ ಸೇರಲು ಅವುಗಳ ಗೊಡವೆ ಬೇಕಿಲ್ಲವೆಂದು ಸ್ಪವಚನಗಳ ಸ್ದಷ್ಟ ಸಂದೇಶವಾಗಿದೆ. ಇಂಥ ಅರಿವಿನ ಮೇಲೆ ನಿಂತ ವಚನ ಸಾಮ್ರಾಜ್ಯ ಗಟ್ಟಿಯಾಗಿರುತ್ತದೆ. 'ಅಹಂಭಾವ ತೊರೆದೊಮ್ಮೆ ಅನುಭವಿ ನೀನಾಗು ಅನುಭಾವ ದೊಡಗೂಡಿ ಸ್ವಾನುಭಾವಿಯ ಜೊತೆಗೂಡು ' ಎನ್ನುವ ಮಾತು ಶರಣಧರ್ಮವು ಸ್ಥಾಪಿಸಬೇಕಾದರೆ ಅಹo ಕಳೆಯಬೇಕು. ಅದು ತೊರೆಯದೆ ಅನುಭಾವ ಪ್ರಪಂಚ ತೆರೆದುಕೊಳ್ಳುವುದಿಲ್ಲ. ಅಂತದ್ದನ್ನು ನೀ ಅಪ್ಪಿದಾಗ ಗುರುವಿನ ಕೀಲಿ ನಿನ್ನದಾಗುವುದು. ಶ್ರದ್ಧೆ,ನಂಬಿಕೆ, ವಿಶ್ವಾಸವೇ ಗಟ್ಟಿಗೊಂಡು ಶಿವ, ಶಿವಯೋಗದ ಸಾಕ್ಷಾತ್ಕಾರವಾಗುವುದು ಅದನ್ನು ನಿನ್ನಿಷ್ಟದಂತೆ ಬದಲಿಸಲಾಗದು ಶಿವ ಸಾನಿಧ್ಯದ ಮೊದಲ ಮೆಟ್ಟಿಲು ನಿಷ್ಠೆಯೇ. ಎನ್ನುವುದನ್ನು ಅನೇಕ ವಚನಗಳ ಅನುಭವದ ತಳಪಾಯವಾಗಿದೆ.

About the Author

ಗುರುಲಿಂಗ ಶಿವಾಚಾರ್ಯರು
(01 September 1962)

ಲೇಖಕರು ಹಾಗೂ ಸಾಹಿತಿ ಶ್ರೀ ಗುರುಲಿಂಗ ಶಿವಾಚಾರ್ಯರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಮಹಾಗಾoವದವರು ತಂದೆ ಚೆನ್ನಯ್ಯ ತಾಯಿ ಕಲ್ಯಾಣಮ್ಮ. ಹುಟ್ಟೂರಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಪೂರೈಸಿ, ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ. ಎ (ತತ್ವಶಾಸ್ತ್ರ) ದಲ್ಲಿ ಸ್ನಾತಕೋತ್ತರ ಪದವಿ ನಂತರ 1980 ರಲ್ಲಿ ಮಹಾಗಾಂವ ಕಳ್ಳಿಮಠದ ಪೀಠಾಧಿಪತಿಗಳಾಗಿ ಅಧಿಕಾರ ಸ್ವೀಕರಿಸಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗುರುತಿಸಿ ‘ಕಳ್ಳಿಮಠದ ಕಲ್ಪತರು’ ಪ್ರಶಸ್ತಿ ನೀಡುತ್ತಾ ಬಂದಿದ್ದಾರೆ. ಮಹಾಗಾಂವ್ ಕಳ್ಳಿಮಠ ಪ್ರಕಾಶನದಿಂದ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿ ಬಡ ಕೂಲಿ ಕಾರ್ಮಿಕರ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿದ್ದಾರೆ . ಶ್ರೀಯುತರಿಗೆ ...

READ MORE

Related Books