ಈ ಪುಸ್ತಕವು ಅರ್.ಪಿ.ಮಂಜುನಾಥ್.ಬಿ.ಜಿ.ದಿನ್ನೆಯವರ ಮೂರನೇ ಕೃತಿಯಾಗಿದೆ. ಇದರಲ್ಲಿ ರಂಗ ಜಂಗಮ, ಕಾರಂತ ರತ್ನ ಎಂದೇ ಪ್ರಸಿದ್ಧರಾದ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಕುಡುದರಹಾಳು ಗ್ರಾಮದ ಡಾ.ಶಿವಕುಮಾರ ತಾತನವರ 353 ವಚನಗಳನ್ನು ಹೊಂದೆದೆ. ಈ ವಚನಗಳು ಸಮಾಜ, ಕಲೆ, ಸಂಸ್ಕೃತಿ, ಸಂಬಂಧಗಳು, ಮೌಲ್ಯಗಳು ಹೀಗೆ ನೂರಾರು ವಿಚಾರಗಳ ಕುರಿತಾದ ಪ್ರಸ್ತುತ ಕಾಲಕ್ಕೆ ಅಗತ್ಯವಾದ ಮೌಲ್ಯಯುತವಾದ ವಚನಗಳನ್ನು ಇಲ್ಲಿ ಸಂಪಾದಿಸಲಾಗಿದೆ.
ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಬೈರಗಾಮದಿನ್ನೆ ಎಂಬ ಆಂಧ್ರ ಗಡಿಭಾಗದವರು ಆರ್.ಪಿ.ಮಂಜುನಾಥ್. ಬಿ.ಜಿ.ದಿನ್ನೆ. ಸಾಹಿತ್ಯ ಮತ್ತು ರಂಗಭೂಮಿಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದಾರೆ. ಮೊದಲ ಕೃತಿ ' ತೋಚಿದ್ದೆ ಗೀಚಿದೆ' ಗೆ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಚೊಚ್ಚಲ ಕೃತಿ ಬಹುಮಾನ ಲಭ್ಯಯವಾಗಿದೆ. ಇದುವರೆಗೂ ನನ್ನ ಸಾಹಿತ್ಯ ಕ್ಷೇತ್ರದಲ್ಲಿ ಎರಡು ಬಾರಿ ಜಿಲ್ಲಾ ಕ.ಸಾ.ಪದಿಂದ ಗೌರವ ಸನ್ಮಾನ. ಹತ್ತಾರು ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕವಿಗೋಷ್ಠಿ ಸನ್ಮಾನ ಹಾಗೂ ಕನ್ನಡ ಪುಸ್ತಕ ಪ್ರಾಧಿಕಾರದ ಉದಯೋನ್ಮುಖ ಯುವ ಸಾಹಿತಿ ಬಿರುದು ಸನ್ಮಾನ ಮಾಡಿದವು. ಕೃತಿ: ತೋಚಿದ್ದೆ ಗೀಚಿದೆ ...
READ MORE