‘ಆಯ್ದ ವಚನಗಳು’ ಸಂಗಮೇಶ ಸವದತ್ತಿಮಠ ಮತ್ತು ಎಸ್. ಎಂ. ಹಿರೇಮಠ ಅವರು ಸಂಪಾದಿಸಿರುವ ವಚನಗಳ ಸಂಗ್ರಹವಾಗಿದೆ. ಇಪ್ಪತ್ತು ವಚನಕಾರರ ಪ್ರಾತಿನಿಧಿಕ ವಚನಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ವಚನಗಳ ಆಯ್ಕೆಯಲ್ಲಿ ಉತ್ತಮ ಗುಣಮಟ್ಟವಿದೆ. ಹೀಗಾಗಿ ವಚನ ಸಾಹಿತ್ಯದ ಓದಿಗೆ ಇದು ಒಂದು ಉತ್ತಮ ಪ್ರವೇಶಿಕೆಯಾಗಿದೆ. ಎಸ್. ಎಂ. ಹಿರೇಮಠ ಅವರು ವಚನ ಸಾಹಿತ್ಯದ ಬಗ್ಗೆ ಪ್ರಸ್ತಾವನೆಯನ್ನು ಬರೆದಿದ್ದು ಅಂತಹ ಹೊಸ ವಿಚಾರಗಳನ್ನು ಹೇಳದಿದ್ದರೂ ವಿದ್ಯಾರ್ಥಿಗಳಿಗೆ ಪರೀಕ್ಷೆಯ ದೃಷ್ಟಿಯಿಂದ ಉಪಯುಕ್ತ ವಾಗಿದೆ.
ಹೊಸತು- ಜುಲೈ-2005
ಈ ಪಠ್ಯಪುಸ್ತಕ 'ಸಾಹಿತ್ಯ ಸಂಕಲನ ಮಾಲೆ'ಯಲ್ಲಿ ಬಂದಿದ್ದು ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ವಚನ ಸಾಹಿತ್ಯದಲ್ಲಿ ಆಸಕ್ತಿ ಇರುವ ಎಲ್ಲರಿಗೂ ಉಪಯುಕ್ತವಾಗಿದೆ. ಇಪ್ಪತ್ತು ವಚನಕಾರರ ಪ್ರಾತಿನಿಧಿ ಕ ವಚನಗಳನ್ನು ಇಲ್ಲಿ ಸಂಗ್ರಹಿಸಲಾಗಿದೆ. ವಚನಗಳ ಆಯ್ಕೆಯಲ್ಲಿ ಉತ್ತಮ ಗುಣಮಟ್ಟವಿದೆ. ಹೀಗಾಗಿ ವಚನ ಸಾಹಿತ್ಯದ ಓದಿಗೆ ಇದು ಒಂದು ಉತ್ತಮ ಪ್ರವೇಶಿಕೆಯಾಗಿದೆ. ಎಸ್. ಎಂ. ಹಿರೇಮಠ ಅವರು ವಚನ ಸಾಹಿತ್ಯದ ಬಗ್ಗೆ ಪ್ರಸ್ತಾವನೆಯನ್ನು ಬರೆದಿದ್ದು ಅಂತಹ ಹೊಸ ವಿಚಾರಗಳನ್ನು ಹೇಳದಿದ್ದರೂ ವಿದ್ಯಾರ್ಥಿಗಳಿಗೆ ಪರೀಕ್ಷೆಯ ದೃಷ್ಟಿಯಿಂದ ಉಪಯುಕ್ತ ವಾಗಿದೆ. ವಚನಕಾರರ ಸಂಕ್ಷಿಪ್ತ ಪರಿಚಯ, ಪಾರಿಭಾಷಿಕ ಪದಗಳ ವಿವರಣೆ, ಶಬ್ದಕೋಶ ಸಹ ಪಠ್ಯಪುಸ್ತಕಕ್ಕೆ ಸರಿಯಾದ ಚೌಕಟ್ಟನ್ನು ಒದಗಿಸಿವೆ. ಆದರೂ ಕೆಲವು ಸಂಕೀರ್ಣವಾದ ವಚನಗಳಿಗೆ ಟಿಪ್ಪಣಿ ಕೊಡಬಹುದಾಗಿತ್ತು. ಅಚ್ಚುಕಟ್ಟಾಗಿ ತಪ್ಪಿಲ್ಲದೆ ಪುಸ್ತಕ ಪ್ರಕಟವಾಗಿದ್ದು ಪಠ್ಯಪುಸ್ತಕದ 'ಮಾಮೂಲಿ ಚಹರೆ' ಯಿಂದ ದೂರವಾಗಿರುವುದು ಮೆಚ್ಚಿಗೆಯ ಅಂಶವಾಗಿದೆ.
©2024 Book Brahma Private Limited.