ಬರಹಗಾರ ಸಿ.ಪಿ.ನಾಗರಾಜ ಅವರ ಕೃತಿ ‘ವಚನದಿಂದ ಆಯ್ದ ಸಾಲುಗಳ ಓದು’. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು 'ವಚನಕಾರರ ವಿಚಾರ ಕ್ರಾಂತಿ' ಎಂಬ ಬರಹದಲ್ಲಿ ಹೇಳಿರುವ ಕೆಲವು ನುಡಿಗಳನ್ನು ಮುನ್ನುಡಿಯ ರೂಪದಲ್ಲಿ ಬಳಸಿಕೊಳ್ಳಲಾಗಿದೆ. ಲೇಖಕರ ಮಾತಿನಲ್ಲಿ ’ಶಿವಶರಣಶರಣೆಯರ ವಚನಗಳನ್ನು ಓದುತ್ತಿದ್ದಾಗ, ನನಗೆ ಮೆಚ್ಚುಗೆಯಾದ ವಚನದ ಕೆಲವು ಸಾಲುಗಳನ್ನು ಓದುಗರ ಗಮನಕ್ಕೆ ತರಬೇಕೆಂಬ ಆಸೆಯಾಯಿತು. ವಚನಗಳನ್ನು ಮೊದಲ ಬಾರಿ ಓದುವವರಿಗೆ ನೆರವಾಗಲೆಂಬ ಉದ್ದೇಶದಿಂದ ಪದಗಳನ್ನು ಬಿಡಿಸಿ ಬರೆದು, ಪದಗಳ ತಿರುಳನ್ನು ತಿಳಿಸಿ, ವಚನದ ಸಾಲುಗಳ ಇಂಗಿತವನ್ನು ನಾಲ್ಕಾರು ವಾಕ್ಯಗಳಲ್ಲಿ ವಿವರಿಸಿ ಗುರುಗಳಾದ ಕೆ.ವಿ.ನಾರಾಯಣ ಅವರಿಗೆ ತೋರಿಸಿದೆನು. ಅದನ್ನು ನೋಡಿದ ಅವರು “ಹೊಸ ತಲೆಮಾರಿನ ಓದುಗರಿಗೆ ಈ ರೀತಿಯ ಬರಹ ಉಪಯೋಗಕ್ಕೆ ಬರಬಹುದು. ಇದನ್ನು ಮುಂದುವರಿಸಿ” ಎಂದು ಸಲಹೆಯನ್ನು ನೀಡಿ, ನನ್ನ ಬರವಣಿಗೆಗೆ ಮಾರ್ಗದರ್ಶನವನ್ನು ಮಾಡಿದರು’ ಎಂಬುದಾಗಿ ಹೇಳಿಕೊಂಡಿದ್ದಾರೆ.
ಕೃತಿಯ ಪರಿವಿಡಿಯಲ್ಲಿ ಅಂಬಿಗರ ಚೌಡಯ್ಯ, ಅಕ್ಕಮಹಾದೇವಿ, ಅಕ್ಕಮ್ಮ, ಅಮುಗೆ ರಾಯಮ್ಮ, ಅಲ್ಲಮ, ಆದಯ್ಯ, ಆಯ್ದಕ್ಕಿ ಲಕ್ಕಮ್ಮ, ಗಜೇಶ ಮಸಣಯ್ಯ, ಗುಪ್ತ ಮಂಚಣ್ಣ, ಚಂದಿಮರಸ, ಚೆನ್ನಬಸವಣ್ಣ, ತೋಂಟದ ಸಿದ್ಧಲಿಂಗ ಶಿವಯೋಗಿ, ದೇಶಿಕೇಂದ್ರ ಸಂಗಮ ಬಸವಯ್ಯ, ನಗೆಯ ಮಾರಿತಂದೆ, ಬಸವಣ್ಣ, ಭೋಗಣ್ಣ ಸೇರಿ 24 ವಚನಕಾರರ ವಚನಗಳ ಪದಗಳನ್ನು ಬಿಡಿಸಿ ಬರೆದು, ಪದಗಳ ತಿರುಳನ್ನು ತಿಳಿಸಿ, ವಚನದ ಸಾಲುಗಳ ಇಂಗಿತವನ್ನು ನಾಲ್ಕಾರು ವಾಕ್ಯಗಳಲ್ಲಿ ಬರೆಯಲಾಗಿದೆ.
©2024 Book Brahma Private Limited.