‘ವಚನ ವಾಹಿನಿ’ ಲೇಖಕಿ ಡಾ. ವಿಜಯಶ್ರೀ ಸಬರದ ಅವರ ಲೇಖನ ಸಂಕಲನ. ಈ ಕೃತಿಗೆ ಗೊ.ರು. ಚನ್ನಬಸಪ್ಪ ಅವರ ಬೆನ್ನುಡಿ ಬರಹವಿದೆ. ವಚನವಾಹಿನಿಯಲ್ಲಿ ವಚನಕಾರರ ಪ್ರಾತಿನಿಧಿಕ ಪ್ರಸ್ತಾಪವಿದ್ದರೂ, ಹನ್ನೆರಡನೆಯ ಶತಮಾನದ ಎಲ್ಲ ವಚನಕಾರರ ಒಟ್ಟು ಅನುಭಾವಿಕ ನೆಲೆ ಅಲೆಯಾಡಿರುವುದನ್ನು ಕಾಣುತ್ತೇವೆ. ವಚನಕಾರರ ಸೂಳ್ನುಡಿಗಳನ್ನು ಲೇಖಕರು ತಲಸ್ಪರ್ಶಿಯಾಗಿ ವಿವೇಚಿಸಿದ್ದಾರೆ. ವಚನ ಸಾಹಿತ್ಯ ಚಿಂತಕರಿಗೆ ಪರಿಷೋಷಕ ಸಾಮಗ್ರಿಯೊದಗಿಸಿರುವ ಈ ಕೃತಿ ಲೇಖಕರ ನಿಡಿದಾದ ಅಧ್ಯಯನಕ್ಕೆ, ನಿಶ್ಚಿತ ಜ್ಞಾನಕ್ಕೆ ಮತ್ತು ವಿದ್ವತ್ತಿನ ವಿವೇಕಕ್ಕೆ ಒಂದು ದಾಖಲೆಯಾಗಿದೆ ಎಂದಿದ್ದಾರೆ ಗೊ.ರು. ಚನ್ನಬಸಪ್ಪ.
ಮಹಿಳೆಯರ ಶೋಷಣೆ ಮತ್ತು ಸ್ತ್ರೀಯರು ಎದುರಿಸುತ್ತಿರುವ ಸವಾಲುಗಳ ಬಗ್ಗೆ ತಮ್ಮ ಖಚಿತ ಅಭಿಪ್ರಾಯ ಮಂಡಿಸುವ ಲೇಖಕಿ ವಿಜಯಶ್ರೀ ಸಬರದ. ಅವರು ಜನಿಸಿದ್ದು 1957ರ ಫೆಬ್ರುವಿರ 1ರಂದು. ತಂದೆ ಗುಣವಂತರಾವ ಪಾಟೀಲ. ತಾಯಿ ಸಂಗಮ್ಮ. ಪ್ರಾರಂಭಿಕ ಶಿಕ್ಷಣ ಹಾಗೂ ಕಾಲೇಜು ಪದವಿ ಶಿಕ್ಷಣವನ್ನು ಬೀದರ್‌ನಲ್ಲಿ ಪಡೆದ ಅವರು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ’ಅನುಪಮಾ ನಿರಂಜನರ ಕಾದಂಬರಿಗಳು; ಒಂದು ಅಧ್ಯಯನ” ಎಂಬ ಪ್ರಬಂಧ ಮಂಡಿಸಿ ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಡೆದ ಪಿಎಚ್.ಡಿ. ಪದವಿ ಪಡೆದರು. ಬೀದರ್‌ನ ಅಕ್ಕ ಮಹಾದೇವಿ ಮಹಿಳಾ ವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಜೀವನ ಆರಂಭಿಸಿದ ಅವರು ನಂತರ ...
READ MORE