ಖ್ಯಾತ ಲೇಖಕ, ವಿಮರ್ಶಕ ಡಾ. ಪಿ.ವಿ.ನಾರಾಯಣ ಅವರ ಕೃತಿ-ಅಕ್ಕನ ವಚನಗಳು. ಶರಣರ ಪರಂಪರೆಯಲ್ಲಿ ಅಕ್ಕಮಹಾದೇವಿಯ ಹೆಸರು ಅಜರಾಮರ. ಮನುಷ್ಯನ ಸಹಜ ಕಾಮನೆಗಳನ್ನು ಹೇಗೆ ಮೀರಬೇಕು ಎಂಬದರ ಹಾಗೂ ಮನೋವಿಜ್ಞಾನಕ್ಕೂ ಸವಾಲಾಗುವ ಆಕೆಯ ಮನೋದೃಢತೆ ಎಷ್ಟು ಬಣ್ಣಿಸಿದರೂ ಸಾಲದು. ಇಂತಹ ಮನೋದೃಢತೆಯ ಅಕ್ಕನ ವಚನಗಳು ಸಹ ಲೌಕಿಕತೆಯ ಹಂತದಲ್ಲಿ ಅರ್ಥಮಾಡಿಕೊಳ್ಳುವುದು ಕಷ್ಟು. ಆದರೆ, ಭಾಷೆಯು ಸರಳ ಹಾಗೂ ಸುಂದರವಾಗಿದ್ದು, ಒಬ್ಬ ಹೆಣ್ಣಾಗಿ, ಪುರುಷ ಪ್ರಧಾನ ಸಮಾಜ ಎಸೆಯುವ ಎಲ್ಲ ಪ್ರಶ್ನೆಗಳಿಗೆ ತನ್ನ ಬದುಕನ್ನು ಉತ್ತರವಾಗಿಸುವ ಆಕೆಯ ಪರಿ ಅನನ್ಯ. ಅಕ್ಕಳ ವಚನಗಳ ಸಂಪಾದನೆಯೊಂದಿಗೆ ವಿಮರ್ಶೆಯೂ ಸಹ ಈ ಕೃತಿಯ ಗಟ್ಟಿತನ.
©2025 Book Brahma Private Limited.