ಲೇಖಕಿ ಪ್ರೊ. ಶೋಭಾದೇವಿ ಚೆಕ್ಕಿ ಅವರ ಕೃತಿ-ಆಧುನಿಕ ವಚನಗಳು. ಶಿವಪ್ರಿಯ ಶ್ರೀ ಕೊತ್ತಲ ಬಸವೇಶ್ವರ ಎಂಬ ನಾಮಾಂಕಿತದೊಂದಿಗೆ ವಚನಗಳನ್ನು ಬರೆದಿದ್ದು ವಿಶೇಷ. ಸಮಾಜ, ಸಂಸ್ಕೃತಿ, ಶಿಕ್ಷಣ, ಆರ್ಥಿಕ, ಆಚಾರ-ವಿಚಾರ ಇತ್ಯಾದಿ ಸಂಗತಿಗಳನ್ನು ವಚನಗಳ ವಸ್ತುವಾಗಿಸಿ, ತಮ್ಮ ಆಶಯಗಳನ್ನು ತುಂಬಿ, ಪರಿಣಾಮಕಾರಿಯಾಗಿಸಿದ್ದಾರೆ. ಹೆಚ್ಚಾಗಿ ಇವು ನೀತಿ-ಬೋಧಪ್ರದವಾಗಿವೆ.
ಲೇಖಕಿ ಪ್ರೊ. ಶೋಭಾದೇವಿ ಚೆಕ್ಕಿ ಅವರು ಮೂಲತಃ ಕಲಬುರಗಿಯವರು. ತಂದೆ: ಪ್ರೊ. ಬಸವಣ್ಣೆಪ್ಪ ಚೆಕ್ಕಿ, ತಾಯಿ ಪ್ರೊ. ಪಾರ್ವತಿ ಚೆಕ್ಕಿ.(ನಿವೃತ್ತ ದಂಪತಿ). ಪ್ರಾಥಮಿಕ ಶಿಕ್ಷಣದಿಂದ ಸ್ನಾತಕೋತ್ತರ ಪದವಿ (ಸಮಾಜಶಾಸ್ತ್ರ) ವರೆಗೂ ಕಲಬುರಗಿಯಲ್ಲೇ ಶಿಕ್ಷಣ. ತಿರುಪತಿಯ ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದಿಂದ ಎಂ.ಫಿಲ್ ಪದವೀಧರರು. ಪ್ರಸ್ತುತ, ಸೇಡಂನ ನೃಪತುಂಗ ಪದವಿ ಮಹಾವಿದ್ಯಾಲಯದಲ್ಲಿ ಸಮಾಜಶಾಸ್ತ್ರ ವಿಭಾಗ ಮುಖ್ಯಸ್ಥೆ. ಸೇಡಂ ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಶಾಂಭವಿ ಮಹಿಳಾ ಸಂಘದ ಅಧ್ಯಕ್ಷರು, ತಾಲೂಕು ಜಾನಪದ ಪರಿಷತ್ತು ಸೇಡಂನ ಸಮ್ಮೇಳನದ ಅಧ್ಯಕ್ಷರು, ರೋವರ್‍ಸ್ ಮತ್ತು ರೇಂಜರ್‍ಸ್ ಲೀಡರ್, ಇವರು ಸಮಾಜಶಾಸ್ತ್ರ ಕುರಿತು ಬರೆದ ಕೃತಿಗಳು ಗುಲಬರ್ಗಾ ವಿಶ್ವವಿದ್ಯಾಲಯ, ಬಳ್ಳಾರಿಯ ಶ್ರೀಕೃಷ್ಣದೇವರಾಯ ...
READ MORE