ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬೈಚನಾಳ ಅವರು 12ನೇ ಶತಮಾನದ ಆಯ್ದ ಶರಣರ ವಚನಗಳನ್ನು ವಿಶ್ಲೇಷಿಸಿದ ಕೃತಿ-ಸತ್ಯ ಸಾಕ್ಷಿಗಳು. 101 ವಚನಗಳನ್ನು ವಿಶ್ಲೇಷಣೆಗೆ ತೆಗೆದುಕೊಂಡಿದ್ದಾರೆ. ಬಸವಾದಿಶರಣರ ತತ್ವಗಳನ್ನು ಮೈಗೂಡಿಸಿಕೊಂಡಿರುವ ಲೇಖಕರು ವಚನಗಳನ್ನು ತಮ್ಮದೇ ರೀತಿಯಲ್ಲಿ ಅರ್ಥ ವಿವರಣೆ ನೀಡಿ, ವಿಶ್ಲೇಷಿಸಿದ್ದಾರೆ. ಶಿವಶರಣರು ಕಂಡುಕೊಂಡ ಸತ್ಯದ ಕಾಯಕ-ದಾಸೋಹ, ಪ್ರಾಮಾಣಿಕತೆ, ನಿಷ್ಠೆ, ಮುಂತಾದ ಸದ್ಗುಣಗಳ ದರ್ಶನ ಮಾಡಿಸುವು ಈ ಕೃತಿಯ ಉದ್ದೇಶ. ಶರಣರಾದವರು ಲೌಕಿಕ ವಿಷಯಗಳನ್ನು ನಿಗ್ರಹಿಸಿಕೊಂಡು, ಅಂತರಂಗ-ಬಹಿರಂಗ ಶುದ್ಧೀಕರಣ, ಇದ್ದಾಗ ಮಾತ್ರ ಶರಣನಾಗುತ್ತಾನೆ. ಅತನಿಂದ ಮಾತ್ರ ಈ ಲೋಕಕ್ಕೆ ಪರೋಪಕಾರಿ ಕಾರ್ಯಗಳು ಜರುಗುತ್ತವೆ.ಎಂಬ ಕಟುಸತ್ಯವನ್ನು "ಸತ್ಯಸಾಕ್ಷಿ" ಕೃತಿಗಳಲ್ಲಿ ಲೇಖಕರು ಅರ್ಥಪೂರ್ಣವಾಗಿ ಹಿಡಿದಿಟ್ಟಿದ್ದಾರೆ.
©2024 Book Brahma Private Limited.