ಲೇಖಕ ಪಂಚಾಕ್ಷರಿ ಬಿ. ಪೂಜಾರಿ ಅವರು ಇಷ್ಟಲಿಂಗ ಪೂಜಾ ವಿಧಾನಗಳ ಕುರಿತು ಸರಳೀಕರಣದ ಪಠ್ಯವಿರುವ ಕೃತಿ. ಭಾಲ್ಕಿಯ ಡಾ. ಬಸವಲಿಂಗ ಪಟ್ಟದ್ದೇವರು ಆಶಯ ನುಡಿಗಳನ್ನು ಬರೆದು ‘ಬಸವಾಕ್ಷರಷ್ಟಕಂ, ಗುರುಬಸವಷ್ಟೋತ್ತರ ನಾಮಾವಳಿ, ಪಾಹಿಮಾಂ ಶರಣು ಬಸವ, ಇಂತಹ ಬಸವ ಪರ ಗೀತೆಗಳನ್ನು ಓದುವಾಗ ಹೃದಯ ತುಂಬು ಬರುತ್ತವೆ. ಇಷ್ಟಲಿಂಗ ಶ್ರದ್ಧೆ ಗಟ್ಟಿಯಾಗುತ್ತದೆ. ಈ ಹಿನ್ನೆಲೆಯಲ್ಲಿ, ಲಿಂಗಾಯತರು ವೈದಿಕ ಮಂತ್ರಗಳಿಂದ ಹೊರಬಂದು ವಚನ ಸಾಹಿತ್ಯವನ್ನು ಅಪ್ಪಿಕೊಳ್ಳಬೇಕೆಂಬ ಆಶಯ ಇಲ್ಲಿಯ ನಾಮವಳಿಗಳ ರಚನೆಯಲ್ಲಿದೆ. ಸರಳ ಸಹಜ ಲಿಂಗಪೂಜೆ ಮಾಡಬೇಕು ಎಂಬ ಕಳಕಳಿಯ ಮನವಿಯೂ ಇದೆ. ವಚನ ಸಾಹಿತ್ಯದ ಆಳ ಅಧ್ಯಯನಕ್ಕೆ ಇಲ್ಲಿಯ ಪೂಜಾವಿಧಾನಗಳು ಕನ್ನಡಿ ಹಿಡಿಯುತ್ತವೆ’ ಎಂದು ಪ್ರಶಂಸಿಸಿದ್ದಾರೆ.
ಕೃತಿಗೆ ಮುನ್ನುಡಿ ಬರೆದ ಸಾಹಿತಿ ಜಯಶ್ರೀ ದಂಡೆ ಅವರು ‘ಇಷ್ಟಲಿಂಗದ ಮಹತ್ವವನ್ನು ಸಾರುವ ತುಂಬಾ ಸರಳ ಹಾಗೂ ಸಹಜ ನಡೆಯನ್ನುಸಮರ್ಥಿಸಿಕೊಳ್ಳುವ ವಿನಮ್ರತೆ ಇದೆ. ಸಕಾರಾತ್ಮಕ ಭಾವನೆಗಳು ಜಾಗೃತವಾಗುವಂತಿವೆ. ಹಾಗೆ ಮಾಡುವುದು ಇಲ್ಲಿಯ ಕವನಗಳ ವಿಶೇಷ ಗುಣವಾಗಿದೆ. ಶೈಲಿ ಚೆನ್ನಾಗಿದೆ. ಕವಿತ್ವ ಶಕ್ತಿ ಇದೆ.’ ಎಂದು ಶ್ಲಾಘಿಸಿದ್ದಾರೆ.
©2025 Book Brahma Private Limited.