ವಚನ ಪಾರಿಭಾಷಾಕೋಶ ಸಮಗ್ರ ವಚನ ಸಂಪುಟ-15

Author : ಎನ್.ಜಿ. ಮಹಾದೇವಪ್ಪ

Pages 428

₹ 850.00




Year of Publication: 1993
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಬೆಂಗಳೂರು

Synopsys

`ವಚನ ಪಾರಿಭಾಷಕೋಶ ಸಮಗ್ರ ವಚನ ಸಂಪುಟ-15’ ಕೃತಿಯು ಎನ್. ಜಿ ಮಹಾದೇವಪ್ಪ ಅವರ ವಚನ ಸಂಪುಟ ಕೃತಿಯಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿ, ‘ಸಮಗ್ರ ವಚನ ಸಾಹಿತ್ಯದ ಪ್ರಕಟನ ಯೋಜನೆ'ಯ ಅಡಿಯಲ್ಲಿ ಈ ಕೃತಿಗಳು ಹೊರಬಂದಿದ್ದು, ಕರ್ನಾಟಕ ಸರ್ಕಾರದ ಈವರೆಗಿನ ಸಾಹಿತ್ಯಕ ಸಾಧನೆಗಳಲ್ಲಿ ಒಂದು ಮಹತ್ವದ ದಾಖಲೆಯಾಗಿದೆ.  ಒಂದು ಸಾಹಿತ್ಯ ಪ್ರಕಾರದ ಪ್ರಕಟನೆ ಎಂದು ವಿಶ್ಲೇಷಿಸಲಾಗಿದೆ. ತತ್ವಕ್ಕೆ ತತ್ವ, ಸಾಹಿತ್ಯಕ್ಕೆ ಸಾಹಿತ್ಯವಾಗಿರುವ 'ವಚನ ವಾಙ್ಞಯ ' ಏಕಕಾಲಕ್ಕೆ ಆತ್ಮಕಲ್ಯಾಣವನ್ನೂ, ಸಮಾಜ ಕಲ್ಯಾಣವನ್ನೂ ಪ್ರತಿಪಾದಿಸುವ ಮೂಲಕ ಜಾಗತಿಕ ಮಹತ್ವ ಗಳಿಸಿದೆ. ಈ ಮೌಲಿಕ ಸಾಹಿತ್ಯವನ್ನು ಸುಲಭ ಬೆಲೆಯಲ್ಲಿ ಜನತೆಗೆ ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ಇವತ್ತಿನ ಮಿತಿಗೆ ಸಿಗುವ ಬಸವಯುಗ ಮತ್ತು ಬಸವೋತ್ತರ ಯುಗಗಳ ಎಲ್ಲ ಶರಣರ ಎಲ್ಲ ವಚನಗಳನ್ನು ಸಂಗ್ರಹಿಸಿ, ಸಂಸ್ಕರಿಸಿ, ಪ್ರಕಟಿಸಿದ ಪ್ರಯತ್ನವಿದು. ಈ ಮೂಲಕ ಬಸವಯುಗದ ಹಲವು ಹೊಸ ವಚನಗಳು ಬೆಳಕಿಗೆ ಬರುವುದರೊಂದಿಗೆ, ಬಸವೋತ್ತರ ಯುಗದ ಸಮಗ್ರ ವಚನ ಸಂಪತ್ತು ಪ್ರಥಮಸಲ ಹೊರ ಬರುತ್ತಿರುವುದು ಈ ಯೋಜನೆಯ ವಿಶೇಷ ಸಾಧನೆಯಾಗಿದೆ. 800 ವರ್ಷಗಳುದ್ದಕ್ಕೂ ಬೆಳೆದುಬಂದ ಈ ಸಾಹಿತ್ಯದ ವ್ಯಾಪ್ತಿಯನ್ನು ಪ್ರಥಮಬಾರಿ ಗುರುತಿಸಿಕೊಡುತ್ತಿರುವ ಈ ಸಾಹಸದ ಫಲವಾಗಿ 22 ಸಾವಿರ ವಚನಗಳು ಸುಮಾರು 10 ಸಾವಿರ ಪುಟ ವ್ಯಾಪ್ತಿಯ 15 ಸಂಪುಟಗಳಲ್ಲಿ (ವಚನ ಪರಿಭಾಷಾಕೋಶ ಸೇರಿ)ಬೆಳಕು ಕಾಣುತ್ತಿದೆ ಎಂಬುದನ್ನು ಪ್ರಸ್ತಾಪಿಸಲಾಗಿದೆ. 

About the Author

ಎನ್.ಜಿ. ಮಹಾದೇವಪ್ಪ

ಡಾ. ಎನ್. ಜಿ. ಮಹಾದೇವಪ್ಪ ಅವರು ಲೇಖಕರು, ಚಿಂತಕರು. ಮೂಲತಃ ಚಿಕ್ಕಮಗಳೂರಿನವರು.ಲಿಂಗಾಯತ ದರ್ಶನ ಮಾಸಿಕ ಪತ್ರಿಕೆಯ ಸಂಪಾದಕರು.  ಕೃತಿಗಳು: ಲಿಂಗಾಯತರು ಹಿಂದೂಗಳಲ್ಲ (ಲೇಖನಗಳ ಸಂಗ್ರಹ ಕೃತಿ), ವಚನ ಪರಿಭಾಷಾಕೋಶ (ವಚನಗಳ ಸಂಗ್ರಹ ಕೃತಿ),  ಸಿದ್ಧಾಂತ ಶಿಖಾಮಣಿಯ ಅಸಂಬದ್ಧ ಸಿದ್ಧಾಂತಗಳು (ವಿಶ್ಲೇಷಣೆ)  ಪ್ರಶಸ್ತಿ-ಪುರಸ್ಕಾರಗಳು:ಬಸವಕಲ್ಯಾಣದ ವಿಶ್ವ ಬಸವಧರ್ಮ ವಿಶ್ವಸ್ಥ ಸಂಸ್ಥೆಯಿಂದ ಡಾ.ಎಂ.ಎಂ. ಕಲಬುರ್ಗಿ ರಾಷ್ಟ್ರೀಯ ಸಂಶೋಧನಾ ಪ್ರಶಸ್ತಿ ಲಭಿಸಿದೆ.   ...

READ MORE

Related Books