‘ಕಮ್ಮಟ ಕೀಲಿ’ ಎಂಬುದು ಲೇಖಕ ಕೆ.ಬಿ. ಮಲ್ಲೇಶಯ್ಯ ಅವರ ಕೃತಿ. ಬಸವಾದಿ ಶಿವಶರಣರ ವಚನಗಳಿಗೆ ಭಾವಾರ್ಥ ಎಂಬುದು ಕೃತಿಗೆ ನೀಡಿರುವ ಉಪಶೀರ್ಷಿಕೆ. 12ನೇ ಶತಮಾನದ ಶಿವಶರಣರ ವಚನಗಳು ಶೋಷಣೆಯನ್ನೇ ಮೂಲವಾಗಿಸಿಕೊಂಡ ಪುರೋಹಿತಶಾಹಿಗಳ ವಿರುದ್ಧ ಬಂಡಾಯವೆದ್ದ ಅಕ್ಷರ ಕ್ರಾಂತಿ. ಜನಸಾಮಾನ್ಯರ ನುಡಿಯಲ್ಲಿ ವಚನಗಳನ್ನು ರಚಿಸುವ ಮೂಲಕ ಜನಜಾಗೃತಿಗೆ ಶ್ರಮಿಸಿದ ವಚನಕಾರರು, ಸಮಾಜ ಸುಧಾರಣೆಗೆ ಯತ್ನಿಸಿದರು. ವಿಶ್ವವ್ಯಾಪಿಯಾಗಿ ಅನ್ವಯವಾಗುವ ಈ ವಚನಗಳ ಗೂಡಾರ್ಥವೂ ಸೇರಿದಂತೆ ಅಂತರಾಳವನ್ನು ಜನಸಾಮಾನ್ಯರಿಗೆ ತಿಳಿಸುವುದು ಶರಣರಿಗೆ ಪ್ರಮುಖವಾಗಿತ್ತು. ಅಂತಹ ಪ್ರಯತ್ನವನ್ನು ಈ ಲೇಖಕರು ಮಾಡಿದ್ದಾರೆ. ವಚನಾಸಕ್ತರಿಗೆ ವಚನಗಳ ಅರ್ಥವನ್ನು ಸುಲಭವಾಗಿ ಗ್ರಹಿಸುವಂತೆ ಮಾಡಿದ್ದು ಮಾತ್ರವಲ್ಲ; ವಚನಗಳನ್ನು ಓದುವ ಪ್ರೇರಣೆಯಾಗಿ ಇಲ್ಲಿಯ ಪ್ರಯತ್ನವಿದೆ.
©2024 Book Brahma Private Limited.