ಲೇಖಕಿ ಡಾ. ಪ್ರೇಮಾ ಅಪಚಂದ ಅವರ ಕೃತಿ- ಶರಣ ಸಾಹಿತ್ಯದಲ್ಲಿ ಅರ್ಥವ್ಯವಸ್ಥೆ. ಅರ್ಥಶಾಸ್ತ್ರದ ಪರಿಕಲ್ಪನೆಗಳಾದ ಕೃಷಿ,ಸ್ವಯಂ ಉದ್ಯೋಗ,ಉತ್ಪಾದನೆ,ವಿತರಣೆ, ಆದಾಯ,ಅನುಭೋಗ, ಉಳಿತಾಯ, ಇತ್ಯಾದಿ ಅಂಶಗಳನ್ನು ಮಂಡಿಸಿದ್ದಾರೆ. ಜೊತೆಗೆ ಶರಣರ ವಚನಗಳಲ್ಲಿ ಬಂಡವಾಳಶಾಹಿ ಮತ್ತು ಸಮಾಜವಾದ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ. ಉತ್ಪಾದನಾ ಸಿದ್ಧಾಂತದಲ್ಲಿ ಕಾಯಕವು ಮಹತ್ವದ ಪಾತ್ರವಹಿಸುತ್ತದೆ 'ಕಾಯಕವೇ ಕೈಲಾಸ 'ಎಂಬ ಶರಣರ ಸಿದ್ಧಾಂತವನ್ನು ಅರ್ಥಶಾಸ್ತ್ರ ದೃಷ್ಟಿಕೋನದಿಂದ ನೋಡಲು ಪ್ರಯತ್ನಿಸಿದ್ದಾರೆ. ಸಮಾಜದಲ್ಲಿ ಆರ್ಥಿಕ ಸಮಾನತೆ ಮತ್ತು ಸಮಾಜದ ಏಳಿಗೆಗೆ ಭದ್ರಬುನಾದಿ ನೀಡುತ್ತದೆ ಎಂದು ಲೇಖಕಿ ವಿವರಿಸಿದ್ದಾರೆ. ಪ್ರಸ್ತುತ ಆಧುನಿಕ ಅರ್ಥವ್ಯವಸ್ಥೆ ಮತ್ತು ಶರಣರ ಆಶಯ ಎಂಬ ಶೀರ್ಷಿಕೆಯಲ್ಲಿ ಶರಣರ ಆರ್ಥಿಕ ಚಿಂತನೆಗಳನ್ನು ಸಂಗ್ರಹ ಮಾಡಿದ್ದಾರೆ. ಹಣ ಬದುಕಿನ ಅವಿಭಾಜ್ಯ ಅಂಗ ಅದನ್ನು ಅಲ್ಲಗಳೆದು ಸಂಪತ್ತಿನ ಸಂಗ್ರಹವನ್ನು ಸಮಾಜದ ಅಭಿವೃದ್ಧಿಗೆ ತೊಡಗಿಸಿದಲ್ಲಿ ದೇಶದ ಕಲ್ಯಾಣ ಸಾಧ್ಯವೆಂಬ ಅರ್ಥಶಾಸ್ತ್ರದ ತತ್ವ ಸಿದ್ಧಾಂತವನ್ನು ಸ್ಪಷ್ಟವಾಗಿ ವಿಶ್ಲೇಷಿಸಿದ್ದಾರೆ.
©2024 Book Brahma Private Limited.