ಲೇಖಕ ಯಲ್ಲಪ್ಪ ಎಂ. ಮರ್ಚೇಡ್ ರವರ, ’ವಚನ ಪ್ರಭೆ’ ಆಧುನಿಕ ವಚನಗಳ ಸಂಕಲನ. ಈ ಕೃತಿಗೆ ಮುನ್ನುಡಿ ಬರೆದ ಪರಮೇಶ್ವರ ಸಾಲಿಮಠ, ’ವಚನ ಪ್ರಭೆ’ ವಚನ ಸಂಕಲನವು ಲೇಖಕರ ಸುಪ್ತ ಚೇತನದ ಪ್ರತೀಕ. ವಚನಗಳಲ್ಲಿ ಅನುಭವದ ಆಳವಿದೆ, ಸಾಮಾಜಿಕ ಚಿಂತನೆಯೊಂದಿಗೆ ಆಧ್ಯಾತ್ಮದ ಅನುಭವವೂ ಸೇರಿ ವಚನಪ್ರಭೆಗೆ ಒಂದು ಸಾಹಿತ್ಯಿಕ ಕಳೆ ಬಂದಿದೆ’ ಎಂದು ಪ್ರಶಂಸಿದ್ದಾರೆ.
ಲೇಖಕ ಯಲ್ಲಪ್ಪ ಎಂ. ಮರ್ಚೇಡ್ ಅವರು ಮೂಲತಃ ರಾಯಚೂರು ತಾಲೂಕಿನ ಜಾಗೀರ್ ಮರ್ಚೇಡ್ ಗ್ರಾಮದವರು. ತಾಯಿ ಹುಸೇನಮ್ಮ. ತಂದೆ ಅಂಜಿನಯ್ಯ ಮ್ಯಾತ್ರಿ. ಮರ್ಚೇಡ್ ಗ್ರಾಮದಲ್ಲೇ ಪ್ರಾಥಮಿಕ ಶಿಕ್ಷಣ, ಜೇಗರಕಲ್ ಗ್ರಾಮದಲ್ಲಿ ಪ್ರೌಢಶಿಕ್ಷಣ, ರಾಯಚೂರಿನಲ್ಲಿ ಪಿಯುಸಿ, ಕಲಬುರಗಿಯಲ್ಲಿ ಡಿ.ಇಡಿ, ರಾಯಚೂರಿನಲ್ಲಿ ಬಿ.ಎ. ಪದವೀದವಿ ಪಡೆದರು. 2012ರಲ್ಲಿ ಅರಣ್ಯ ಇಲಾಖೆಯಲ್ಲಿ ಉದ್ಯೋಗಕ್ಕೆ ಸೇರಿದರು. ಜೊತೆಗೆ, ಹಂಪಿಯ ಕನ್ನಡ ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯದಿಂದ ಎಂ.ಎ. (2015) ಪೂರ್ಣಗೊಳಿಸಿದರು. ಕೃತಿಗಳು: 2013ರಲ್ಲಿ ಅವರ ಚೊಚ್ಚಲ ಕವನ ಸಂಕಲನ- "ಮಡಿಲು", ಬಣ್ಣದ ಗುಬ್ಬಿ (ಶಿಶು ಗೀತೆಗಳ ಸಂಕಲನ), ’ವಚನ ಪ್ರಭೆ’ (ಆದುನಿಕ ವಚನಗಳ ಸಂಕಲನ), ’ಕನಸೊಂದು ಕಣ್ಮರೆ’ (ಕವನ ಸಂಕಲನ) ಪ್ರಕಟವಾಗಿದೆ. ...
READ MORE