‘ಮತ್ತೆ ಕಲ್ಯಾಣದೆಡೆಗೆ’ ವೀರಪ್ಪ ಮರಳವಾಡಿ ಅವರ ಕೃತಿಯಾಗಿದೆ. ಕೆಲವು ಆಧುನಿಕ ವಚನಕಾರರಂತೆ ಇಲ್ಲಿಯವು ಕೇವಲ ರೂಪಸಾದೃಶ್ಯದ ವಚನಗಳಲ್ಲ. ವೀರಪ್ಪ ಮರಳವಾಡಿಯವರು ತಮ್ಮ ಅಭಿವ್ಯಕ್ತಿಯ ಅನಿವಾರ ಮಾಧ್ಯಮವೆಂಬಂತೆ ಆಧುನಿಕ ಭಾವ ಸಂಘರ್ಷಗಳನ್ನು ಸಮರ್ಥವಾಗಿ 'ವಚನಿಸಿದ್ದಾರೆ. ಅವುಗಳಲ್ಲಿ ಸಂಕೀರ್ಣತೆಯಿದೆ, ಸರಳತೆಯ ಸೊಗಸಿದೆ, ಚಿಂತನೆಗಳನ್ನು ಪ್ರಚೋದಿಸುವ ಜೀವಾಳವಿದೆ. ಎಲ್ಲ ವಚನಗಳಲ್ಲೂ ಕನ್ನಡ ಸುಲಲಿತವಾಗಿ, ಸಾರ್ಥಕವಾಗಿ ನುಡಿದಿದೆ. ಹೌದು, ಕೆಲವು ವಚನಗಳಂತೂ ಅರ್ಥವಿಲಾಸಗಳಿಂದ ಅಂತರಂಗದಲ್ಲಿ ಅನುರಣಿಸುತ್ತವೆ. ವಚನಕಾರರ ಸಾಮಾಜಿಕ, ಧಾರ್ಮಿಕ, ಮಾನವೀಯತೆಯ ಕಳಕಳಿ ಹೇಗೆ ಎಲ್ಲ ಕಾಲಕ್ಕೂ, ಅದರಲ್ಲೂ ನಮ್ಮ ಕಾಲಕ್ಕೆ ಪ್ರಸ್ತುತವೋ ಹಾಗೇ ಅವರ ಅಭಿವ್ಯಕ್ತಿ ಮಾಧ್ಯಮದ ವಚನಗಳು ಇಂದಿಗೂ ಕೂಡ ಪ್ರಸ್ತುತವೆಂಬುದನ್ನು ಈ ಲೇಖಕರ ವಚನಗಳು ದೃಢೀಕರಿಸುತ್ತವೆ ಎಂದು ಸು. ರುದ್ರಮೂರ್ತಿ ಶಾಸ್ತ್ರಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.