ಲೇಖಕ ರಂಜಾನ್ ದರ್ಗಾ ಅವರ ವೈಚಾರಿಕ ಕೃತಿ-ಲಿಂಗವ ಪೂಜಿಸಿ ಫಲವೇನಯ್ಯ. ಶರಣರ ನಡೆ-ನುಡಿ ಧಾರ್ಮಿಕವಾಗಿದ್ದರೂ ಅದಕ್ಕೆ ವೈಜ್ಞಾನಿಕ ತಳಹದಿ ಇದೆ. ದೇವರ ಅಸ್ತಿತ್ವದ ಸ್ವರೂಪ, ಅದರ ಸಮರ್ಥನೆಗಳು ಎಲ್ಲವೂ ವೈಜ್ಞಾನಿಕ. ಸೀಮಿತ ಜ್ಞಾನದ ಪರಿಧಿಯಲ್ಲಿರುವ ಮನುಷ್ಯನಿಗೆ ದೇವರು ನಿರಾಕಾರ ಎಂದರೆ ಅದನ್ನು ಜೀರ್ಣಿಸಿಕೊಳ್ಳಲು ಆಗದು. ಅದಕ್ಕೆ ಅವರಿಗೆ ಭೌತಿಕವಾದ ಇಲ್ಲವೇ ಸ್ಥಾವರವಾದ ವಸ್ತು ಬೇಕು. ಆ ಕಾರಣಕ್ಕೆ ಬಸವಣ್ಣನು ಲಿಂಗ ಧಾರಣೆ ಮಾಡಿಸಿದ. ಆದರೆ, ಲಿಂಗವೇ ದೇವರಲ್ಲ ಎಂಬುದು ಬಸವಣ್ಣನಿಗೆ ತಿಳಿದಿತ್ತು. ವ್ಯವಸ್ಥೇಯೊಂದನ್ನು ವಿರೋಧಿಸುವ ಯಾವುದೇ ಚಳವಳಿಯ ಸಂಘಟನೆಗಾಗಿ ಒಂದು ಸಂಕೇತ ಅಗತ್ಯ. ಆದ್ದರಿಂದ, ಬಸವಣ್ಣನವರು ಲಿಂಗವನ್ನು ನೀಡಿದ್ದರು. ಇದನ್ನು ಪೂಜಿಸುತ್ತಲೇ ಅಲೌಕಿಕವಾಗಿ ದೇವರನ್ನು ಗ್ರಹಿಸಬೇಕು ಎಂದು ಹೇಳುತ್ತಾ ಅವರು ಲಿಂಗವ ಪೂಜಿಸಿದರೆ ಫಲವೇನು? ಎಂಬಂತಹ ಕ್ರಾಂತಿಕಾರಿ ಹಾಗೂ ದೇವರನ್ನು ಕಾಣುವ ಅಂತಿಮ ಸತ್ಯವನ್ನು ಮನದಟ್ಟು ಮಾಡಿಸಲು ಯತ್ನಿಸಿದ್ದರು. ಇಂತಹ ವಿಷಯ ವಸ್ತುವಿನ ಕೃತಿ ಇದು.
©2024 Book Brahma Private Limited.