ಬಸವಣ್ಣ ಮತ್ತು ಶಿವಯೋಗ

Author : ಎಂ.ಎಸ್. ಸಿಂಧೂರ

Pages 90

₹ 60.00




Year of Publication: 2014
Published by: ವಚನ ಅಧ್ಯಯನ ಕೇಂದ್ರ
Address: ನಾಗನೂರು ರುದ್ರಾಕ್ಷಿ ಮಠ, ಶಿವಬಸವನಗರ, ಬೆಳಗಾವಿ

Synopsys

‘ಬಸವಣ್ಣ ಮತ್ತು ಶಿವಯೋಗ’ ಕೃತಿಯು ಎಂ.ಎಸ್. ಸಿಂಧೂರ ಅವರ ಲೇಖನಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; `ಪ್ರಾಚೀನ ಕಾಲದಲ್ಲಿ ಮಹಾಕವಿಗಳು ರಚಿಸಿದ ರಾಮಾಯಣ, ಮಹಾಭಾರತ ಮಹಾ ಕಾವ್ಯಗಳ ಓದಿ ಜ್ಞಾನಾರ್ಜನ ಗೈದು, ಅಂದಿನಿಂದ ಇಂದಿನವರೆಗೆ ನೂರಾರು ಕವಿಗಳು, ಸಾಹಿತಿಗಳು ಆ ಮಹಾನ್ ಕಾವ್ಯಗಳಲ್ಲಿ ವಿರಾಜಿಸುವ ರಾಮ ಕೃಷ್ಣಾದಿ ಮಹಾಪುರುಷರ ಬಗ್ಗೆ, ಆ ಪಾತ್ರಗಳ ಬಗ್ಗೆ ಸೂಕ್ಷ್ಮವಾಗಿ ಗ್ರಹಿಸಿ, ತಮ್ಮ ವಿಶಿಷ್ಟವಾದ ವಿನೂತನ ಶೈಲಿಯಲ್ಲಿ ಮಹಾ ವ್ಯಕ್ತಿಗಳ ವ್ಯಕ್ತಿತ್ವ, ದಿವ್ಯ ಸಂದೇಶ ಕುರಿತು ಶ್ರೇಷ್ಠ ಗ್ರಂಥಗಳನ್ನು ರಚಿಸಿದರು. ಹಾಗೆಯೇ, ಮಹಾಪುರುಷ ಬಸವಣ್ಣನವರ ಕುರಿತು ಅವರ ಸಮಕಾಲೀನ ಮಹಾಕವಿಗಳು ರಚಿಸಿದ ಕಾವ್ಯಗಳನ್ನು ಹಾಗೂ ಬಸವಣ್ಣನವರ ಸಾನಿಧ್ಯದಲ್ಲಿದ್ದ ಮಹಾನ್ ಶರಣ ಶರಣೆಯರು ರಚಿಸಿದ ವಚನಗಳನ್ನು ಅಧ್ಯಯನ ಗೈದು, ತಮ್ಮ ವಿಚಕ್ಷಕ ತೀಕ್ಷ್ಯಬುದ್ಧಿ, ಅನುಭಾವಗಳಿಂದ ಬಸವಣ್ಣನವರ ವ್ಯಕ್ತಿತ್ವದ ಅನುಭೂತಿಯನ್ನು ಪಡೆದು ವಿಶಿಷ್ಟವಾದ ವಿನೂತನ ಶೈಲಿಯಲ್ಲಿ ನೂರಾರು ಕವಿಗಳು, ದಾರ್ಶನಿಕರು, ಸಾಹಿತಿಗಳು ಗ್ರಂಥಗಳನ್ನು ರಚಿಸಿ; ಬಸವಣ್ಣನವರ ಲೋಕೋದ್ಧಾರ ಹಾಗೂ ಅವರ ದಿವ್ಯ ಸಂದೇಶ ಕುರಿತು ಜನತೆಗೆ ಅರುಹಿದ್ದಾರೆ. ಅವರ ಮಾಲಿಕೆಯಲ್ಲಿ ಹಿರಿಯರಾದ ಶ್ರೀ ಎಂ. ಎಸ್. ಸಿಂಧೂರ ಸಹ  ಒಬ್ಬರಾಗಿದ್ದಾರೆ. ಈ  ಗ್ರಂಥ ಬಸವಣ್ಣ ಹಾಗೂ ಶಿವಯೋಗ''ದಲ್ಲಿ ಬಸವಣ್ಣನವರು ಮಾನವ-ಮಾನವರಲ್ಲಿಯ ಜಾತಿ, ಅಂತಸ್ತುಗಳ ಭೇದ-ಭಾವವನ್ನು ಅಳಿಸಿಹಾಕಿ, ನೈತಿಕ ತಳಹದಿಯ ಮೇಲೆ ಸರ್ವ ಸಮಾನತೆಯ ಸಮಾಜ ನಿರ್ಮಾಣದ ಘನ ಮಣಿಹದಿಂದಲೇ ತಮ್ಮ ಬದುಕನ್ನು ಅರ್ಪಿಸಿದರು. ಮಧ್ಯ ಯುಗದಲ್ಲಿ ಪುರುಷನ ಪ್ರಾಬಲ್ಯದಿಂದಾಗಿ ತನ್ನ ಸಾಮಾಜಿಕ ಸ್ವಾತಂತ್ರ್ಯವನ್ನು ಕಳೆದುಕೊಂಡು ಕೇವಲ ಪಂಜರದ ಪಕ್ಷಿಯಂತೆ ಪುರುಷನ ಗುಲಾಮಳಾಗಿ ಬಾಳುವ ಮಹಿಳೆಯನ್ನು ಮತ್ತೆ ಗೌರವದ ಸ್ಥಾನದಲ್ಲಿ ಕೂಡ್ರಿಸಿ ಆಕೆಯನ್ನು ಪೂಜ್ಯಭಾವದಿಂದ ಕಾಣುವ ದಿವ್ಯ ವಾತಾವರಣ ನಿರ್ಮಿಸಿದರು : ಧರ್ಮ, ಸಮಾಜ ಕುರಿತಂತೆ ಸಾರ್ವಕಾಲಿಕ ಮಾನ್ಯತೆಯ, ಸಮಾನತೆಯ, ವೈಜ್ಞಾನಿಕ ಸಿದ್ಧಾಂತಗಳನ್ನಿತ್ತವರು. ಕಾಯಕ ತತ್ವವನ್ನು ಜಾರಿಯಲ್ಲಿ ತಂದು, ಜಿಡ್ಡುಗಟ್ಟಿದ ಸಮಾಜವನ್ನು ಕ್ರಿಯಾಶೀಲಗೊಳಿಸಿದವರು, ಭೌತಿಕ ಸಂಪತ್ತು ಒಂದೆಡೆ ರಾಶಿರಾಶಿಯಾಗಿ ಸಂಗ್ರಹವಾಗಿ ಉಳ್ಳವರ ಮದಾಂಧತೆಯನ್ನು ಬೆಳೆಸುತ್ತಿರುವ ಭೀಕರ ಪರಿಸ್ಥಿತಿ ಹೋಗಲಾಡಿಸಲು ದಾಸೋಹ ತತ್ವ ಅರುಹಿ ಮಾನವತೆ ಮೆರೆಯಲು ಸಂದೇಶವಿತ್ತವರು ಎಂಬ ಸಂಗತಿಗಳನ್ನು ಸ್ಪಷ್ಟಗೊಳಿಸಿದ್ದಾರೆ’ ಎಂದಿದೆ.

 

About the Author

ಎಂ.ಎಸ್. ಸಿಂಧೂರ

ಲೇಖಕ ಎಂ.ಎಸ್. ಸಿಂಧೂರ ಅವರು ಮೂಲತಃ ಬಾಗಲಕೋಟೆಯವರು. ಮಹಾರಾಷ್ಟ್ರದ ಜತ್ತ ಪ್ರದೇಶದಲ್ಲಿ ಕನ್ನಡ ಉಳಿವಿಗಾಗಿ ಹೋರಾಡಿದವರು. ಕೃತಿಗಳು : ನಾ ಕಂಡ ಅಣ್ಣ ಬಸವಣ್ಣ ಪ್ರಶಸ್ತಿ-ಪುರಸ್ಕಾರಗಳು : ಪ್ರೊ.ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ಲಭಿಸಿದೆ. ...

READ MORE

Related Books