ಆದ್ಯ ವಚನಕಾರ ಜೇಡರ ದಾಸಿಮಯ್ಯನ ಜನಜನಿತವಾದ 25 ವಚನಗಳ ಸುಂದರ, ಸರಳ ವಿಶ್ಲೇಷಣೆ, ವಿವರಣೆಯೊಂದಿಗೆ ವಿಶೇಷ ಒಳನೋಟ. ಚಿಕ್ಕ ಚಿಕ್ಕ ರಚನೆಗಳ ಮೂಲಕ ಘನವಾದ ಹೊಳಹು ನೀಡುವ ಈ ಕೃತಿ ಓದುಗನನ್ನು ಹಿಡಿದು ನಿಲ್ಲಿಸುತ್ತದೆ. ಲೇಖಕರು ಶೋಷಣೆಗೆ ಒಳಗಾದವರ ಕುರಿತಾಗಿ ದಾಸಿಮಯ್ಯನ ದನಿಗೆ ಇನ್ನಷ್ಟು ಇಂಬು ನೀಡುವಲ್ಲಿಯ ಪ್ರಯತ್ನ ನಿಚ್ಥಳವಾಗಿ ತೋರುತ್ತದೆ. ಪ್ರತಿ ವಚನದ ನಿಗೂಢತೆಯನ್ನು, ಹೊರಗೆಡುವುವಲ್ಲಿ ಸಾಹಿತ್ಯದ ಸೊಬಗನ್ನು ಆಸ್ವಾದಿಸುವಲ್ಲಿ ಕೃತಿ ಗಮನ ಸೆಳೆಯುತ್ತದೆ.
ಮೂಲತಃ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಬೇನಾಳ ಗ್ರಾಮದವರಾದ ಬರಹಗಾರ ಮಹಾದೇವ ಬಸರಕೋಡ ಅವರು ಜನಿಸಿದ್ದು 1972 ಜೂನ್ 14ರಂದು. ನಿಡಗುಂದಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಇಲಕಲ್ಲಿನ ಎಸ್.ಆರ್. ಕಂಠಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬಿ.ಎಡ್ ಹಾಗೂ ರಸಾಯನ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪ್ರಸ್ತುತ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿರುವ ಇವರಿಗೆ ಕನ್ನಡ ಸಾಹಿತ್ಯ ಆಸಕ್ತಿ ಕ್ಷೇತ್ರ. ಮಹಾದೇವ ಅವರ ಪ್ರಮುಖ ಕೃತಿಗಳೆಂದರೆ ಬದುಕು ಬೆಳಕು, ತಮಂಧ ಘನ ಕಳೆದು (ಕವನ ಸಂಕಲನ), ಒಡಲುಗೊಂಡವ (ವಚನ ಸಾಹಿತ್ಯ), ಹಸಿವೆಂಬ ಹೆಬ್ಬಾವು, ವರ್ತಮಾನದಲ್ಲಿ ನಿಂತು ...
READ MORE