ಪತ್ರಕರ್ತ -ಲೇಖಕ ರಂಜಾನ್ ದರ್ಗಾ ಅವರ ಚಿಂತನಾತ್ಮಕ ಬರಹಗಳ ಕೃತಿ-ಶರಣರ ಸಮಗ್ರ ಕ್ರಾಂತಿ. 12ನೇ ಶತಮಾನದ ಶರಣರ ಚಳವಳಿಯು ಒಂದು ನಿರ್ದಿಷ್ಟ ದಿಕ್ಕನ್ನು, ಉದ್ದೇಶವನ್ನು ಹೊಂದಿದೆ. ಅದು ಪುರೋಹಿತಶಾಹಿಯಿಂದಾಗುವ ಎಲ್ಲ ಬಗೆಯ ಶೋಷಣೆಗಳ ವಿರುದ್ಧವಾಗಿತ್ತು. ಇಂತಹ ಚಿಂತನೆಗ ವ್ಯಾಪ್ತಿಗೆ ತಳ ಸಮುದಾಯವನ್ನು ಎಳೆದು ತರುವುದು ಅವರ ಉದ್ದೇಶವಾಗಿತ್ತು. ಈ ರೀತಿಯ ನಡೆಯು ಶರಣರ ಸಮಗ್ರ ಕ್ರಾಂತಿಯ ಮೂಲ ಚೇತನವೂ ಆಗಿತ್ತು. ಆದ್ದರಿಂದ, ಧರ್ಮ, ದೇವರು ವಿಷಯದಲ್ಲಿ ಶೋಷಿಸುವ ಎಲ್ಲ ಆಚರಣೆಗಳ ವಿರುದ್ಧ ಬಂಡೆದ್ದರು. ಸರ್ವಜನತೆಯ ಸಮಾನತೆಯೇ ಈ ಕ್ರಾಂತಿಯ ಉದ್ದೇಶವಾಗಿತ್ತು. ಇಂತಹ ಚಿಂತನೆಗಳ ಬರಹಗಳು ಒಳಗೊಂಡ ಕೃತಿ ಇದು.
©2024 Book Brahma Private Limited.