ವಚನಸಿರಿ

Author : ಎಚ್.ಆರ್.ಲೀಲಾವತಿ

Pages 180

₹ 180.00




Year of Publication: 2022
Published by: ಸಂವಹನ ಪ್ರಕಾಶನ
Address: ರಾಜೇಂದ್ರ ಪ್ರಿಂಟರ್ಸ್ ಆಂಡ್ ಪಬ್ಲಿಷರ್ಸ್, 12/1,  ಇವಿನಿಂದ ಬಜಾರ್ ಹಿಂದೆ, ಶಿವರಾಂ ಪೇಟೆ, ಮೈಸೂರು
Phone: 9902639593

Synopsys

‘ವಚನಸಿರಿ’ ಕೃತಿಯು ಎಚ್.ಆರ್. ಲೀಲಾವತಿ ಅವರ ಸಂಕಲನವಾಗಿದೆ. ಈ ಕೃತಿಯಲ್ಲಿ 500ಕ್ಕೂ ಅಧಿಕ ಚಿಕ್ಕ ಚಿಕ್ಕ ವಚನಗಳಿವೆ. ವಿವಿಧ ವಿಚಾರಗಳ ಕುರಿತ ಈ ವಚನ ಕೃತಿಯು ಧರ್ಮಸ್ಥಳದ ಮಂಜುನಾಥ ಸ್ವಾಮಿಯ ಸ್ಮರಣೆಯೊಂದಿಗೆ ಅಂತ್ಯವಾಗುತ್ತದೆ. ಬದುಕಿನ ಒಲವು, ಗೆಲುವು, ನೋವು ನಲಿವುಗಳನ್ನು ಶಬ್ಧಗಳಲ್ಲಿ ಸೆರೆಹಿಡಿದಿದ್ದಾರೆ. ಬಳಸಿದ ಭಾಷೆ ಒಂದು ರೀತಿಯ ಆಹ್ಲಾದಕರವಾದ ಓದಿನ ಅನುಭವವನ್ನು ನೀಡುತ್ತದೆ. ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಬಹಳಷ್ಟು ಸಾಲುಗಳನ್ನು ಇಲ್ಲಿ ಕಾಣಬಹುದು.

About the Author

ಎಚ್.ಆರ್.ಲೀಲಾವತಿ
(08 February 1935)

ಸುಗಮ ಸಂಗೀತ ಕ್ಷೇತ್ರದಲ್ಲಿ ಛಾಪು ಮೂಡಿಸಿರುವ ಹೆಚ್.ಆರ್. ಲೀಲಾವತಿ ಜನಿಸಿದ್ದು 1935 ಫೆಬ್ರುವರಿ 8ರಂದು. ಮೂಲತಃ ಬೆಂಗಳೂರಿ ನವರು. ಬಾಲ್ಯದಿಂದಲೇ ಸಂಗೀತ ಕ್ಷೇತ್ರದ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದರು.  ಇವರ ಕನ್ನಡ ಹಾಡುಗಳು ಮಾಸ್ಕೊ ರೇಡಿಯೋ ಕೇಂದ್ರದಿಂದಲೂ ಪ್ರಸಾರವಾಗಿವೆ. ಸಿನಿಮಾಗಳಿಗೂ ಹಾಡಿರುವ ಇವರು ಸಾಹಿತ್ಯ ಕ್ಷೇತ್ರದಲ್ಲಿಯೂ ತೊಡಗಿಸಿಕೊಂಡಿದ್ದಾರೆ.  ಮದ್ರಾಸಿನಲ್ಲಿ ನಡೆದ ಸಂಗೀತ ಸಮ್ಮೇಳನ, ಅಮೆರಿಕದ ಟ್ರೆನ್‌ಟನ್ ಪ್ರಥಮ ವಿದೇಶಿ ಕನ್ನಡ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. ಕರ್ನಾಟಕ ಕಲಾತಿಲಕ, ರಾಜ್ಯೋತ್ಸವ ಪ್ರಶಸ್ತಿ, ಶಿಶುನಾಳ ಷರೀಫ ಪ್ರಶಸ್ತಿ, ಡಾ. ಎಸ್.ಕೆ. ಕರೀಂಖಾನ್ ಪ್ರಶಸ್ತಿ ಮುಂತಾದ ಗೌರವಗಳು ಲಭಿಸಿವೆ.  ಇವರ ಪ್ರಮುಖ ಕೃತಿಗಳೆಂದರೆ ಲಹರಿ, ಚಿತ್ತಾರ, ಸಾವಿರದ ...

READ MORE

Related Books