‘ಶಿವಶರಣರ ತೇಜೋವಧೆ’ ಕೃತಿಯು ಸಂಗಮೇಶ ಬಿರಾದಾರ ಅವರು ಸೊಲ್ಲಾಪುರ ಸಿದ್ಧರಾಮೇಶ್ವರ ಕುರಿತು ಬರೆದ ಚರಿತ್ರೆಯ ವಿಮರ್ಶೆಯ ಬರಹಗಳಾಗಿವೆ. ಈ ಕೃತಿಯಲ್ಲಿನ ಕುರಿತ ಕೆಲವೊಂದು ವಿಚಾರಗಳು ಹೀಗಿವೆ; ಶಿವಯೋಗಿ ಸಿದ್ಧರಾಮೇಶ್ವರರ ಚರಿತ್ರೆಯನ್ನು 13ನೆಯ ಶತಮಾನದಲ್ಲಿ ರಾಘವಾಂಕ ಕವಿಯು ಅತ್ಯಂತ ಮನೋಜ್ಞವಾಗಿ ಚಿತ್ರಿಸಿದ್ದಾನೆ. ಸಿದ್ಧರಾಮೇಶ್ವರರನ್ನು ಹತ್ತಿರದಿಂದ ಕಂಡು ಅಥವಾ ಅವರ ಸಮಕಾಲೀನರ ಹೇಳಿಕೆಗಳನ್ನು ಆಧರಿಸಿ, ರಾಘವಾಂಕ 'ಸಿದ್ಧರಾಮ ಚಾರಿತ್ರ' ಬರೆದ. ಇಂಥ ಸಾಂಸ್ಕೃತಿಕ ಕೃತಿಯ ವಿಚಾರಗಳನ್ನೇ ಬದಲು ಮಾಡಿ ರಾಘವಾಂಕನ ಹೆಸರಿನಲ್ಲಿ ಮತ್ತೊಂದು ‘ರೊಟ್ಟಿ ಸಿದ್ಧರಾಮೇಶ್ವರ ಚರಿತ್ರೆ'ಯನ್ನು ಸೊಲ್ಲಾಪುರದ ಹಣ್ಣು ಮಂಡಳ ಪ್ರಕಟಿಸಿತು. ನಿಜವಾದ ಸಿದ್ಧರಾಮನ ಜೀವನ ಮರೆಮಾಡಿ, ಅಲ್ಲಿಯ ಎಲ್ಲ ವಿಚಾರಗಳನ್ನು ಪಲ್ಲಟಗೊಳಿಸಲಾಯಿತು. ಶಿವಯೋಗಿ ಸಿದ್ಧರಾಮನನ್ನು ಆಚಾರ್ಯ ಸಿದ್ಧರಾಮನನ್ನಾಗಿ ರೂಪಾಂತರಿಸಿದರು. ಆ ಪುಸ್ತಕವನ್ನು ಮೇಲಿಂದ ಮೇಲೆ ಪುನರ್‌ಮುದ್ರಣಗೊಳಿಸಿದರು. ಕರ್ನಾಟಕದ ತುಂಬ ಪ್ರತಿಭಟನೆಗಳಾದವು. ಆದರೆ, ಆ ಕೃತಿಯ ನಿಜವಾದ ದೋಷಗಳನ್ನು ಎತ್ತಿ ತೋರಿಸುವ ಸಾಹಸವನ್ನು ಮಾಡಿದವರು ಡಾ. ಸಂಗಮೇಶ ಚಿರಾದಾರ. ಇಂಥದೇ ಇನ್ನೊಂದು ವಿವಾದ ಅಲ್ಲಮಪ್ರಭುವಿಗೆ ಸಂಬಂಧಿಸಿದ್ದಾಗಿದೆ. ಈ ಬೊಟ್ಟಿ ಸಿದ್ಧರಾಮ ಚರಿತ್ರೆಯನ್ನು ಆಧಾರವಾಗಿಟ್ಟುಕೊಂಡು ಅಲ್ಲಮನನ್ನು ಬೇಡಕುಲದವನು ಎಂದು ಹೇಳರುವುದನ್ನು ಡಾ. ಬಿರಾದಾರ ಅವರು ಸಾಕ್ಷ್ಯಾಧಾರಗಳಿಂದ ಅಲ್ಲಗಳೆದು, ಶಿವಶರಣರ ತೇಜೋವಧೆ ನಡೆಯಬಾರದೆಂಬ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ’ ಎಂದಿದೆ.
©2024 Book Brahma Private Limited.