ಫ.ಗು. ಹಳಕಟ್ಟಿ ಅವರು ವಚನಗಳ ಸಂಗ್ರಹ ಕಾರ್ಯದಲ್ಲಿ ಪ್ರಮುಖರು. ಈ ಕೆಲಸವಾಗದಿದ್ದರೆ ವಚನ ಸಾಹಿತ್ಯದಲ್ಲಿ ಈವರೆಗಾದ ಸಾಧನೆ ಆಗುತ್ತಿರಲೇ ಇಲ್ಲ. ವಚನಗಳನ್ನು ಸಂಶೋಧಿಸಿ, ವಿಶ್ಲೇಷಿಸಿ, ಸಂಪಾದಿಸಿ ಪ್ರಕಟಿಸಿದ್ದು ಅವರ ಸಾಧನೆ. ಸುಮಾರು 63 ಶಿವಶರಣರು ಜೀವನ ಸಾಗಿ ಬಂದ ವೃತ್ತಾಂತವನ್ನು, ವಚನಗಳ ರಚನೆಗೆ ಅವರ ವ್ಯಕ್ತಿತ್ವದ ಹಿನ್ನೆಲೆಯನ್ನು ಇಲ್ಲಿ ವಿಶ್ಲೇಷಣೆಗೆ ಒಳಪಡಿಸಿದ್ದಾರೆ. ಆದ್ದರಿಂದ, ಇಲ್ಲಿಯ 63 ಶರಣರ ಜೀವನ ವೃತ್ತಾಂತದ ಜೊತೆಗೆ ಅವರ ವಚನಗಳ ಹಾಗೂ ಅವುಗಳ ಸಾರವನ್ನು ಸಮಗ್ರವಾಗಿ ತಿಳಿಯಲು ಸಾಧ್ಯವಾಗಿದೆ. ಈ ಹಿನ್ನೆಲೆಯಲ್ಲಿ, ಈವರೆಗೂ ಸಂಶೋಧನಾ ಕಾರ್ಯಗಳಿಗೆ ಈ ಕೃತಿಯು ಉತ್ತಮ ಆಕರ ಗ್ರಂಥವಾಗಿದೆ.
©2025 Book Brahma Private Limited.