ವಚನ ಸೂಕ್ತಿ - ಮಾತು ಮುತ್ತಿನ ಹಾರ

Author : ಲಿಂಗಾರೆಡ್ಡಿ ಶೇರಿ

Pages 196

₹ 175.00




Year of Publication: 2021
Published by: ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನ
Address: ಕಲಬುರ್ಗಿ

Synopsys

ಲಿಂಗಾರೆಡ್ಡಿ ಶೇರಿ ಅವರು ರಚಿಸಿರುವ "ವಚನ ಸೂಕ್ತಿ - ಮಾತು ಮುತ್ತಿನ ಹಾರ" ಕೃತಿಯನ್ನು ಅವಲೋಕಿಸಿದಾಗ ಈ ಕೃತಿಯಲ್ಲಿ ವಚನದ ಸಾಲುಗಳು ಮೌಲಿಕ ಹಾಗೂ ಅರ್ಥಪೂರ್ಣವಾಗಿವೆ. ಒಂದು ಸಾಲು, ಎರಡು ಸಾಲು, ಮೂರು ಸಾಲುಗಳನ್ನು ಆಯ್ಕೆಮಾಡಿಕೊಂಡು ಪುಸ್ತಕಗಳನ್ನು ಸಿದ್ಧಪಡಿಸಿದ್ದಾರೆ.ಇಲ್ಲಿರುವ ವಚನಗಳು ಗಮನಿಸಿದರೆ ಇವುಗಳು ಕನ್ನಡದ ವೇದಗಳೆಂದು, ಸಂಸ್ಕೃತದ ಶುಭಾಶಿತಗಳೆಂದು, ಉಪನಿಷತ್ತಿನ ವಿಚಾರಗಳೆಂದು, ಭಗವದ್ಗೀತೆಯ ಭಾವನೆಗಳೆಂದು ಬಣ್ಣಿಸಲಾಗಿದೆ. ಅಲ್ಲಲ್ಲಿ ಉಪನ್ಯಾಸಗಳಲ್ಲಿ ಉಲ್ಲೇಖಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಸಂಗ್ರಹಿಸಿದ್ದಾರೆ. ಕಲಬುರ್ಗಿಯ ಸಿದ್ದಲಿಂಗೇಶ್ವರ ಬುಕ್ ಡಿಪೋ ಮತ್ತು ಪ್ರಕಾಶನದಿಂದ 2021ರಲ್ಲಿ ಪ್ರಕಟಗೊಂಡ ಈ ಕೃತಿಯಲ್ಲಿ ಒಟ್ಟು 196 ಪುಟಗಳಿದ್ದು 175 ರೂಪಾಯಿ ಬೆಲೆ ನಿಗದಿಪಡಿಸಲಾಗಿದೆ.

About the Author

ಲಿಂಗಾರೆಡ್ಡಿ ಶೇರಿ
(01 April 1951)

ಲೇಖಕ ಲಿಂಗಾರೆಡ್ಡಿ ಸೇರಿ  ಅವರು ಮೂಲತಃ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಜಾಕನಹಳ್ಳಿ ಗ್ರಾಮದವರು. ತಂದೆ ಬಸರೆಡ್ಡಿ, ತಾಯಿ ವೀರಮ್ಮ. ಜಾಕನಹಳ್ಳಿ, ಕೊಲಕುಂದಾ ಹಾಗೂ ಮದನಾ ಗ್ರಾಮದಲ್ಲಿ ಪ್ರಾಥಮಿಕ, ಪ್ರೌಢಶಿಕ್ಷಣ ಪೂರೈಸಿದರು. ಕಲಬುರಗಿಯ ಎಸ್.,ಬಿ. ಕಲಾ ಮಹಾವಿದ್ಯಾಲಯದಲ್ಲಿ ಪಿಯುಸಿ, ಕರ್ನಾಟಕ ವಿವಿ ಯಿಂದ ಬಿ.ಎ, ಹಾಗೂ ಬೆಂಗಳೂರು ವಿ.ವಿ.ಯಿಂದ ಬಿ.ಇಡಿ, ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಿಂದ ತೆಲುಗು ಭಾಷೆಯಲ್ಲಿ ಡಿಪ್ಲೊಮಾ ಹಾಗೂ ಕರ್ನಾಟಕ ವಿ.ವಿ.ಯಿಂದ ಎಂ.ಎ. (ಬಾಹ್ಯ) ಪದವೀಧರರು.   ಸಿರಿಗೆರೆಯ ಶ್ರೀ ತರಳಬಾಳು ವಿದ್ಯಾ ಸಂಸ್ಥೇಯಲ್ಲಿ ಶಿಕ್ಷಕ ವೃತ್ತಿ ಆರಂಭ, ನಂತರ ಅವರು ಕಡಕೋಳ, ತೂಲಹಳ್ಳಿ, ರಾಣೇಬೆನ್ನೂರು ಹೀಗೆ ...

READ MORE

Related Books