ಶರಣ ಯುಗದ ಮೂರೂವರೆ ಶತಮಾನಗಳ ನಂತರ ಸಿಖ್ ಧರ್ಮ ಹುಟ್ಟಿಕೊಂಡಿದ್ದರೂ ಆ ಧರ್ಮಕ್ಕೆ ಸ್ವತಂತ್ರ ಮಾನ್ಯತೆ ಇದೆ. ಆದರೆ, ಅದಕ್ಕಿಂತಲೂ ಪೂರ್ವದಲ್ಲಿ ಹುಟ್ಟಿ ಸಾಮಾಜಿಕ ಚಳವಳಿ ಮೂಲಕ ಸುಧಾರಣೆಗೆ ಯತ್ನಿಸಿದ ಶರಣರ ಲಿಂಗಾಯತ ಧರ್ಮಕ್ಕೆ ಇನ್ನೂ ಸ್ವತಂತ್ರತೆಯ ಮಾನ್ಯತೆ ಇಲ್ಲ. ಶರಣರ ವಿಚಾರಗಳನ್ನು ಸ್ಥಾಪಿತ ಧರ್ಮ-ಸಿದ್ಧಾಂತಗಳೊಂದಿಗೆ ತೌಲನಿಕ ಅಧ್ಯಯನಗಳು ಇಲ್ಲಿಯ ಲೇಖನಗಳಾಗಿವೆ. ಶರಣರ ಆಚಾರ -ವಿಚಾರಗಳು ಯಾವುದೇ ಸ್ಥಾಪಿತ ಧರ್ಮಕ್ಕಿಂತಲೂ ಕಡಿಮೆ ಏನಿಲ್ಲ ಎಂಬ ಪ್ರತಿಪಾದನೆಯನ್ನು ಪ್ರತಿ ಲೇಖನಗಳಲ್ಲೂ ವ್ಯಕ್ತವಾಗಿದೆ.
©2024 Book Brahma Private Limited.