ಲೇಖಕ ವಿರೇಶ ಕುರಿ ಅವರ ವಚನಗಳ ಸಂಗ್ರಹ 'ವಚನ ಜ್ಯೋತಿ'. ಈ ಸಂಕಲನದಲ್ಲಿ 310 ವೈವಿಧ್ಯಮಯ ಆಧುನಿಕ ವಚನಗಳಿವೆ. ಭುವನದ ಭಾಗ್ಯ ಪೂಜ್ಯ ಅಭಿನವ ಗವಿಶ್ರೀಗಳ ಆಶೀರ್ವಾಣಿ, ಕವಿ ಡಾ.ಶಿವಕುಮಾರ್ ಮಾಲಿಪಾಟೀಲ್ ರವರ ಮುನ್ನುಡಿ ಮತ್ತು ಅಂತರಾಷ್ಟ್ರೀಯ ಖ್ಯಾತಿಯ ಹಾಸ್ಯ ಭಾಷಣಕಾರರು ಹಾಗೂ ಅಂಕಣಕಾರರು ಶ್ರೀ ಗಂಗಾವತಿ ಪ್ರಾಣೇಶ್ ರವರ ಬೆನ್ನುಡಿ ಈ ಸಂಕಲನದಲ್ಲಿದೆ.
ಕೊಪ್ಪಳದ ಕುಕನೂರು ತಾಲ್ಲೂಕಿನ ಸೋಂಪೂರದವರಾದ ಲೇಖಕ ವೀರೇಶ ಕುರಿ ಅವರು ಬಸಪ್ಪ ಕುರಿ- ಪಾರವ್ವ ಕುರಿ ಪುತ್ರನಾಗಿ 30-06-1987 ರಂದು ಜನಿಸಿದರು. ಸ.ಹಿ.ಪ್ರಾ.ಶಾಲೆ ಸೋಂಪೂರದಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿದ ಅವರು, ಸೋಂಪೂರದ ಶ್ರೀ ಶರಣಬಸವೇಶ್ವರ ಹೈಸ್ಕೂಲ್ ದಲ್ಲಿ ಪ್ರೌಢ ಶಿಕ್ಷಣವನ್ನು ಪೂರ್ತಿಗೊಳಿಸಿದರು. ಪಿ.ಯು.ಸಿಯನ್ನು ಶ್ರೀ ಜಗದ್ಗುರು ಅನ್ನದಾನೀಶ್ವರ ಪದವಿಪೂರ್ವ ಮಹಾ ವಿದ್ಯಾಲಯ, ಮುಂಡರಗಿ( ಶ್ರೀ ಮಠದ ವಸತಿ ನಿಲಯದಲ್ಲಿ ಊಟ ಮತ್ತು ವಾಸ್ತವ್ಯದೊಂದಿಗೆ) ಹಾಗೂ ಡಿ.ಇಡಿ: ಕೊಪ್ಪಳದ ಸರಕಾರಿ ಶಿಕ್ಷಕರ ತರಬೇತಿ ಸಂಸ್ಥೆ( ಶ್ರೀ ಗವಿಸಿದ್ದೇಶ್ವರ ಮಠದ ಉಚಿತ ಪ್ರಸಾದ ಮತ್ತು ವಸತಿ ನಿಲಯದ ಆಶ್ರಯದೊಂದಿಗೆ) ಯಲ್ಲಿ ...
READ MORE