‘ಬಸವ ಮಾರ್ಗ’ ಲೇಖಕ ಡಾ. ಬಸವರಾಜ ಸಬರದ ಅವರ ಲೇಖನ ಸಂಕಲನ. ಕೃತಿಯ ಬಗ್ಗೆ ತಿಳಿಸುತ್ತಾ ‘ವಚನಸಾಹಿತ್ಯಕ್ಕೆ ಸಂಬಂಧಿಸಿದಂತೆ ಈ ನಾಲ್ಕು ದಶಕಗಳಲ್ಲಿ ನಾನು 25 ಕೃತಿಗಳನ್ನು ರಚಿಸಿದ್ದೇನೆ. ಅವುಗಳಲ್ಲಿ ವಚನ ಚಳುವಳಿ, ವಚನ ಸಂಸ್ಕೃತಿ, ವಚನಗಳ ಪ್ರಾಯೋಗಿಕ ವಿಮರ್ಶೆ, ಇವು ವಿಮರ್ಶಾ ಕೃತಿಗಳಾದರೆ ಬಸವೇಶ್ವರ ಪುರಂದರದಾಸ, ಶರಣರು ಮತ್ತು ದಾಂಪತ್ಯ, ಹೈದ್ರಾಬಾದ ಕರ್ನಾಟಕದ ವಚನ ಸಾಹಿತ್ಯ ಚರಿತ್ರೆ’ ಇವು ಸಂಶೋಧನಾ ಕೃತಿಗಳಾಗಿವೆ. ಇದೇ ಅವಧಿಯಲ್ಲಿ ಬಸವಣ್ಣನವರನ್ನು ಕುರಿತು ಅನೇನ ಲೇಖನಗಳನ್ನು ರಚಿಸಿದ್ದೇನೆ. ಅವುಗಳಲ್ಲಿ ಕೆಲವು ಲೇಖನಗಳನ್ನು ಆಯ್ದು ಈ ಕೃತಿಯಲ್ಲಿ ಜೋಡಿಸಿದ್ದೇನೆ ಎಂದಿದ್ದಾರೆ ಲೇಖಕ ಬಸವರಾಜ ಸಬರದ. ಜೊತೆಗೆ ಈ ಕೃತಿ ಬಸವಣ್ಣನವರ ಜೀವನ ಚರಿತ್ರೆಯಾಗಿರದೆ, ನಾನು ಕಂಡುಕೊಂಡ ಬಸವಮಾರ್ಗವಾಗಿದೆ ಎಂದಿದ್ದಾರೆ.
©2024 Book Brahma Private Limited.