ಸುಭಾಷ್ ಚಂದ್ರ ಕಶೆಟ್ಟಿ,ಬಾಚನಾಳ ಅವರ ಕೃತಿ-ಶರಣರ ಅಂತರಂಗ. ಶರಣರು ಕುರಿತ ಕಶೆಟ್ಟಿಯವರ ವಿಚಾರಧಾರೆಯು ವಿಶ್ಲೇಷಣಾತ್ಮಕವಾಗಿ ಮೂಡಿವೆ. ಮೂಢನಂಬಿಕೆಗಳು ತಿರಸ್ಕಾರ, ಶ್ರೇಷ್ಠ ಬದುಕಿಗೆ ಶರಣರ ಕೊಡುಗೆ, ಜಾತಿಯ ಬಗ್ಗೆ ಶರಣರ ನಿಲುವು, ಶರಣರ ದೃಷ್ಟಿಯಲ್ಲಿ ನಡೆ-ನುಡಿ, ಶರಣರು ಕಂಡ ದೈವಬಲ, ಡಂಭಾ ಚಾರಕ್ಕೆ ಶರಣರ ತಿರಸ್ಕಾರ, ದುರ್ಜನರ ಸಂಗ -ಸರ್ವಭಂಗ, ಅಂತರಂಗ ದರ್ಶನ, ಶರಣರು ಹಾಗೂ ಶರೀರ ಎಂಬ 11 ಲೇಖನಗಳಿವೆ. ಸುಮಾರು 150ಕ್ಕಿಂತ ಹೆಚ್ಚಿನ ವಚನಗಳ ಉಲ್ಲೇಖಗಳೊಂದಿಗೆ ಲೇಖನಗಳು ನಿರೂಪಣೆ ಗೊಂಡಿವೆ. ವಚನಗಳನ್ನು ಆಧಾರವಾಗಿಟ್ಟುಕೊಂಡು ಅವುಗಳಿಗೆ ಸರಳವಾಗಿ ವ್ಯಾಖ್ಯಾನ ಮಾಡುತ್ತಾ ಪ್ರತಿಯೊಂದು ವಿಷಯವನ್ನು ಸಹೃದಯದಲ್ಲಿ ಮನದಟ್ಟು ಮಾಡುವ ವಿಧಾನ ಗಮನಾರ್ಹವಾಗಿದೆ.
ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಮಲಾಪುರದಲ್ಲಿ ಪಿಯುಸಿ, ಕಲಬುರಗಿಯಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸರ್ಕಾರದ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ (2006) ನಿವೃತ್ತರಾದರು. ಕಮಲಾಪುರ ಸುತ್ತಮುತ್ತಲಿನ ಸಾಧು-ಸಂತರ ಬಗ್ಗೆ, ಜಾನಪದ,ವಚನ ಸಾಹಿತ್ಯ,ನಾಟಕ, ಕವನ, ಜೀವನ ಚರಿತ್ರೆ,ಕುರಿತು 30ಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಕೃತಿಗಳು: ಬದುಕಿನ ಪ್ರಜ್ಞೆ, ಕಾನನದ ಹೂಗಳು, ಸುಗಂಧ ಪುಷ್ಪಗಳು, ಸುಮಂಗಲ ಗೀತೆಗಳು (ಸಂ) ಜೇನುಹನಿ (ಕವನ ಸಂಕಲನ), ನಿತ್ಯಸತ್ಯ (ಚಿಂತನಗಳು), ಜನಮೆಚ್ಚಿದ ನಾಯಕ ಶ್ರೀ ಶಂಕರಶೆಟ್ಟಿ ಪಾಟೀಲರು ...
READ MORE