ಶರಣರ ವಚನ ಸಾಹಿತ್ಯದಿಂದ ಪ್ರೇರಿತರಾದ ಲೇಖಕ ಸಂಗಮೇಶ ತಮ್ಮನಗೌಡ್ರ ಅವರು ಅದೇ ಚಿಂತನೆಯ ಧಾಟಿಯಲ್ಲಿ ತಮ್ಮ ಆಲೋಚನೆಗಳನ್ನು ವ್ಯಕ್ತಪಡಿದ್ದೇ ಈ ಕೃತಿ-ಸುಮಧುರ ವಚನಗಳು. 1990 ರಲ್ಲಿ ಈ ಕೃತಿಯು ಮೊದಲು ಪ್ರಕಟಣೆ ಕಂಡಿತ್ತು. `ಒಪ್ಪುವ ಮಾತನ್ನು ಮಾತ್ರ ಒಪ್ಪಿಕೊಳ್ಳುತ್ತೇನೆ. ಯಾರು ಏನೇ ಅಂದರೂ ತಲೆಕಡಿಸಿಕೊಳ್ಳುವುದಿಲ್ಲ' ಎಂದು ತಮ್ಮ ನಿರ್ಧಾರದಲ್ಲಿ ಅಚಲತೆಯನ್ನು ಕಾಯ್ದುಕೊಂಡು ವಚನಗಳನ್ನು ಬರೆದಿದ್ದಾರೆ. ಶರಣರ ಮನೋವೃತ್ತಿಯೇ ಇಲ್ಲಿಯ ಇವರ ಆಧುನಿಕ ವಚನಗಳ ಆಶಯವೂ ಆಗಿದೆ.
ಸಂಗಮೇಶ ತಮ್ಮನಗೌಡ್ರ (ಎಸ್.ವಿ. ತಮ್ಮನಗೌಡ್ರ) ಮೂಲತಃ ಗದಗ ಜಿಲ್ಲೆಯ ಗುಜಮಾಗಡಿ ಗ್ರಾಮದವರು. (ಜನನ: 15-01-1970) ಸದ್ಯ, ರೋಣ ತಾಲೂಕಿನ ಬೂದಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮಹಾರಾಷ್ಟ್ರದ ಕೊಲ್ಹಾಪುರ ವಿ.ವಿ.ಯಿಂದ ಎಂ.ಎ, ಮಧುರೈ ಕಾಮರಾಜ ವಿವಿಯಿಂದ ಎಂ.ಫಿಲ್ ಹಾಗೂ ಮುಂಬೈ ವಿ.ವಿ.ಯಿಂದ ಪಿಎಚ್ ಡಿ (ವಿಷಯ: ಕನ್ನಡದಲ್ಲಿ ಏಕಾಂಕಗಳು: ಒಂದು ಅಧ್ಯಯನ-1975-95) ಪದವಿ ಪಡೆದರು. ದ.ರಾ. ಬೇಂದ್ರೆ ವೇದಿಕೆ ಸ್ಥಾಪಿಸಿ (2000) ನಿರಂತರವಾಗಿ ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಕೃತಿಗಳು: ಹಂಸ, ಸ್ಫೂರ್ತಿ-ಕವನ ಸಂಕಲನಗಳು, ಮತ್ತೆ ಹುಟ್ಟಿತು ಕವನ-ಭಾವಗೀತೆಗಳ ಸಂಕಲನ, ಪಶ್ಚಾತ್ತಾಪ, ಕರುಳಿನ ಬೆಲೆ, ಖಳನಾಯಕನ ...
READ MORE