ಇಷ್ಟಲಿಂಗ ವಿವಿಧ ಆಯಾಮಗಳು

Author : ಮೃತ್ಯುಂಜಯ ರುಮಾಲೆ

Pages 332

₹ 300.00




Year of Publication: 2021
Published by: ಅರಿವು ಪ್ರಕಾಶನ
Address: ಅ.ನ.ಕೃ ರಸ್ತೆ, ವೆಂಕಟೇಶ ನಗರ, ಶಿವಮೊಗ್ಗ 577201

Synopsys

ಡಾ. ಮೃತ್ಯುಂಜಯ ರುಮಾಲೆ ಅವರ ‘ಇಷ್ಟಲಿಂಗ ವಿವಿಧ ಆಯಾಮಗಳು’ ಕೃತಿಯು ಸಂಪಾದಿತ ಲೇಖನಗಳ ಸಂಕಲನವಾಗಿದೆ. ಕೃತಿಯು ಮೂರು ಭಾಗಗಳನ್ನು ಒಳಗೊಂಡಿದೆ. ಭಾಗ 1 : ವಚನೋಕ್ತಿ ಇಷ್ಟಲಿಂಗಾನುಸಂಧಾನ (ಮೃತ್ಯುಂಜಯ ರುಮಾಲೆ), ಇಷ್ಟಲಿಂಗ : ಸಾಮಾಜಿಕ ಆಯಾಮ (ಪ್ರಕಾಶ ಗಿರಿಮಲ್ಲನವರ), ಇಷ್ಟಲಿಂಗ : ಆಧ್ಯಾತ್ಮಿಕ ಆಯಾಮ (ಪ್ರೊ.ಜಿ.ಬಿ.ಹಳ್ಯಾಳ, ಇಷ್ಟಲಿಂಗ : ಸಾಂಸ್ಕೃತಿಕ ಆಯಾಮ (ಜೆ.ಎಂ.ನಾಗಯ್ಯ) ಇಷ್ಟಲಿಂಗ : ವೈಜ್ಞಾನಿಕ ಆಯಾಮ (ಅವಿನಾಶ ಕವಿ) ಭಾಗ-2 : ಸಂಸ್ಕಾರಗಳು : ಜ್ಞಾನದೀಕ್ಷೆ ಮತ್ತು ಇಷ್ಟಲಿಂಗಧಾರಣ (ಡಾವಿಲ್ಯಂ ಮಾಡ್ತ), ಇಷ್ಟಲಿಂಗದ ಅವಶ್ಯಕತೆಯ ಪ್ರಸ್ತಾವನೆ (ಜಿ.ಆರ್.ಭಸ್ಮಾಂಗ ದೇವರು) ಪ್ರಾಣ ಲಿಂಗಾರ್ಚನೆ (ಮಧುರ ಚೆನ್ನ), ಇಷ್ಟಲಿಂಗೋಪಾಸನಾಕ್ರಮ (ವೈ.ನಾಗೇಶ ಶಾಸ್ತ್ರ), ಇಷ್ಟಲಿಂಗೋಪಾಸನೆಯಲ್ಲಿ ಆತ್ಮವಿಕಾಸ : ಶ್ರೀ ಜ.ಚ.ನಿ., ಇಷ್ಟಲಿಂಗ ರಹಸ್ಯ (ಕುಮಾರಸ್ವಾಮಿಗಳು, ತಪೋವನ), ಶರಣರ ಅಷ್ಟಾವರಣ ನಿಷ್ಠೆ (ಕುಮಾರಸ್ವಾಮಿಗಳು, ತಪೋವನ), ಬಸವಣ್ಣನವರ ವಚನದಲ್ಲಿ ಬ್ರಹ್ಮಾಂಡ ಹಾಗೂ ದೇವರ ಸಂಕೇತವಾಗಿರುವ ಕರಸ್ಥಳದಲ್ಲಿರುವ ಇಷ್ಟಲಿಂಗ (ಸಿ.ವಿ.ಪ್ರಭುಸ್ವಾಮಿಮಠ), ಲಿಂಗಾಂಗ ಸಾಮರಸ್ಯ : ಶ್ (ಮಹಾದೇವ ಸ್ವಾಮಿಗಳು ಸರ್ಪಭೂಷಣಮಠ), ಶಿವಯೋಗ ( ಸದಾಶಿವ ಮಹಾಸ್ವಾಮಿಗಳು, ಹಾನಗಲ್ಲು), ಶಿವಯೋಗ (ಪುಟ್ಟರಾಜ ಗವಾಯಿಗಳು), ಶಿವಯೋಗ (ಅನಾಮಧೇಯ ಹಸ್ತಪ್ರತಿಗಳಿಂದ) ಇಷ್ಟಲಿಂಗ (ಎಂ.ಎಂ.ಕಲಬುರ್ಗಿ), ಇಷ್ಟಲಿಂಗ (ಬಸವ ಮರುಳಸಿದ್ದ), ಲಿಂಗಪೂಜೆಯ ಬೆಳವಣಿಗೆಯ ಇತಿಹಾಸ ( ಹರ್ಡೆಕರ ಮಂಜಪ್ಪ ಸ್ವಾಮೀಜಿ, ಶಿವಮೊಗ್ಗ) ಭಾಗ-3 : ಲಿಂಗ ಮತ್ತು ಇಷ್ಟಲಿಂಗಗಳ ಪರಿಕಲ್ಪನೆ (ಬಿ.ವಿ.ಮಲ್ಲಾಪುರ), ಇಷ್ಟಲಿಂಗ ದೀಕ್ಷೆ (ಷಣ್ಮುಖಯ್ಯ ಸ್ವಾಮಿ ಅಕ್ಕೂರಮಠ), ಇಷ್ಟಲಿಂಗ ಪೂಜಾವಿಧಾನ (ಸಿದ್ಧರಾಮ ಸ್ವಾಮಿಗಳು) ಇಷ್ಟಲಿಂಗದ ಅನುಸಂಧಾನ (ಅನ್ನದಾನೀಶ್ವರ ಮಹಾಸ್ವಾಮಿಗಳು), ಇಷ್ಟಲಿಂಗ-ಧಾರ್ಮಿಕ ಮತ್ತು ಆಧ್ಯಾತ್ಮಿಕ ಮಹತ್ವ (ಶಿವಕುಮಾರ ಮಹಾಸ್ವಾಮಿಗಳು), ಇಷ್ಟಲಿಂಗ : ಯೋಗವಿಚಾರ( ಯೋಗೀಶ ಯಡ್ರಾವಿ) ಈ ಬರಹಗಳನ್ನು ಒಳಗೊಂಡಿದೆ.

ಕೃತಿಯ ಬೆನ್ನುಡಿಯಲ್ಲಿನ ಸಾಲುಗಳು ಹೀಗಿವೆ; ಇಷ್ಟಲಿಂಗವನ್ನು ಆಯತ ಮಾಡಿಕೊಳ್ಳುವ, ಸ್ವಾಯತಗೊಳಿಸಿಕೊಳ್ಳುವ ಮತ್ತು ಸನ್ನಿಹಿತವಾಗುವ ಕ್ರಿಯೆಯು ಸಮಷ್ಟಿಯಲ್ಲಿರುವ ಚೈತನ್ಯವನ್ನು ದೃಷ್ಟಿಯಲ್ಲಿ ಶೋಧಿಸಿ , ಆತ್ಮಶು‌ದ್ದಿ ಮಾಡಿಕೊಳ್ಳುವ ಅನುಭಾವಿಕ ಆಚರಣೆಯಾಗಿದೆ. ದೈಹಿಕದ ಜೊತೆಗೆ ಪಾರಾಮಾರ್ಥಿಕ, ಆಧ್ಯಾತ್ಮಿಕ, ವೈಜ್ಞಾನಿಕ, ಸಾಂಸ್ಕೃತಿಕ ಮತ್ತು ಮುಖ್ಯವಾಗಿ ಸಾಮಾಜಿಕತೆ ಒಳಗೊಂಡಂತೆ ಅಂತರಂಗ-ಬಹಿರಂಗದ ನೆಲೆಯೂ ಸ್ವಾಸ್ಥ್ಯಗೊಂಡು ಸಮಗ್ರತೆಯ ಪ್ರಜ್ಞಾಪೂರ್ವಕ ಘಟಕವಾಗಲು ಪ್ರೇರೇಪಿಸುವ ವಿಶಿಷ್ಟ ಆಚರಣೆಯಾಗಿದೆ. ಬ್ರಹ್ಮಾಂಡವನ್ನೇ ವ್ಯಾಪಿಸಿದ ಆತ್ಮಂತಿಕ ಶಕ್ತಿ-ಚೈತನ್ಯವು ಕರಸ್ಥಲದಲ್ಲಿ ನೆಲೆಗೊಳ್ಳುತ್ತದೆ ಎಂಬ ನಂಬಿಕೆಯು ಸಮಷ್ಟಿ -ದೃಷ್ಟಿಯನ್ನು ಏಕೀಭಾವದಲ್ಲಿ ಖಚಿತಗೊಳಿಸುತ್ತದೆ.

About the Author

ಮೃತ್ಯುಂಜಯ ರುಮಾಲೆ

ಡಾ. ಮೃತ್ಯುಂಜಯ ರುಮಾಲೆ ಅವರು ಹೊಸಪೇಟೆಯ ವಿಜಯನಗರ ಮಹಾವಿದ್ಯಾಲಯ ಕನ್ನಡ ವಿಭಾಗದ ಪ್ರಾಧ್ಯಾಪಕರು. ಜೇಡರ ದಾಸಿಮಯ್ಯ, ಹಾವಿನಹಾಳು ಕಲ್ಲಪ್ಪಯ್ಯಗಳ ಪವಾಡ ಸಾಂಗತ್ಯ, 'ವಚನ ನಿಘಂಟು' (ಸಂಕೀರ್ಣ), ಸಮಗ್ರ ಸಂಶೋಧಕ ಎಂ ಎಂ ಕಲಬುರ್ಗಿ ಸೇರಿದಂತೆ ಇತರೆ ಕೃತಿಗಳನ್ನು ರಚಿಸಿದ್ದಾರೆ.  ...

READ MORE

Related Books