ಲೇಖಕ ಡಾ. ಹಣಮಂತ ಬಿ ಮೇಲಕೇರಿ ಅವರ ’ರಾಯಚೂರು ಜಿಲ್ಲೆಯ ಆಧುನಿಕ ಸಾಹಿತ್ಯ’ ಕೃತಿಯು ಜೀವಪರ ಮತ್ತು ಜನಪದ ಮಾನವೀಯ ಮೌಲ್ಯಗಳನ್ನು ಒಳಗೊಂಡಿದೆ. ಕೃತಿಗೆ ಮುನ್ನುಡಿ ಬರೆದಿರುವ ಎಂ. ನಾಗರಾಜ ಅವರು, ‘ಕನ್ನಡ ಸಾಹಿತ್ಯದ ಎರಡು ಕಣ್ಣಗಳೆಂದು ಗುರುತಿಸಿಕೊಂಡಿರುವ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಪ್ರಕಾರಗಳು ಈ ನೆಲದ ಬದುಕು ಹೌದು. ಬೆಳಕು ಹೌದು , ಕಲ್ಯಾಣ ಕರ್ನಾಟಕದಲ್ಲಿಯೇ ರಾಯಾಚೂರು ಜಿಲ್ಲೆಯು ಬಹಳ ವಿಶಿಷ್ಟವಾದ ಜಿಲ್ಲೆಯಾಗಿದೆ. ಇಲ್ಲಿನ ಸಾಹಿತ್ಯ ಸಂಸ್ಕೃತಿ , ಧರ್ಮ ಹಾಗೂ ಶೈಕ್ಷಣಿಕ, ಐತಿಹಾಸಿಕವಾಗಿ ಪರಂಪರೆಯನ್ನು ಪಡೆದುಕೊಡಿದೆ. ಹಾಗೆಯೇ, ಕನ್ನಡ ಸಾಹಿತ್ಯದ ತವರು ಮನೆ ಎಂದು ಹೆಸರಾದ ಈ ಜಿಲ್ಲೆಗೆ ಬಿ.ಎಂ. ಶ್ರೀಯವರು ‘ಕನ್ನಡದ ಕಾಶಿ’ ಎಂದು ಕರೆದಿದ್ದಾರೆ. ಈ ನಾಡಿನಲ್ಲಿ ಶರಣರು, ದಾಸರು ಇವರನ್ನೆಲ್ಲ ಸಮನ್ವಯಕ್ಕೆ ಸುಂದರ ದೃಷ್ಟಾಂತವಾಗಿದೆ ಎಂದು ಹೇಳಬಹುದಾಗಿದೆ. ನಾವು ಸಮಾಜದಲ್ಲಿ ಹೇಗೆ ವರ್ತಿಸಬೇಕೆಂದು ವಚನಗಳು ತಿಳಿಸುತ್ತದೆ’ ಎಂದು ಅಭಿಪ್ರಾಯ ಪಟ್ಟಿದ್ದಾರೆ..
©2024 Book Brahma Private Limited.