ಡಾ.ವಿಜಯಕುಮಾರ ಜಿ ಪರುತೆ ರಚಿಸಿದ ಕೃತಿ-ವಚನ ಧಾರೆ. ಈ ಕೃತಿಯಲ್ಲಿ ಒಟ್ಟು 256 ಆಧುನಿಕ ವಚನಗಳಿವೆ. ವಿಜ್ಞಾನ, ಸಮಾಜ ಶಿಕ್ಷಣ, ಅಂಧಶ್ರದ್ಧೆ, ಕಂದಾಚಾರ ವಿರುದ್ಧ ಧ್ವನಿ, ವ್ಯಾಪಾರ, ಗುರು, ಲಿಂಗ, ಜಂಗಮ.ಹೀಗೆ ಹಲವು ವಿಷಯಗಳ ಒಳಗೊಂಡಿವೆ. .ಶ್ರೀಮಠದ ಪೂಜ್ಯರ ಆಶಿರ್ವಚನ, ಡಾ.ನಾಗೇಂದ್ರ ಮಸೂತಿ ಅವರ ಮುನ್ನುಡಿ ಮತ್ತು ಮುಡಬಿ ಗುಂಡೆರಾವ ಅವರ ಬೆನ್ನುಡಿ ಇದೆ.
ಲೇಖಕ ಡಾ. ವಿಜಯಕುಮಾರ ಜಿ. ಪರುತೆ ಅವರು ಕಲಬುರಗಿ ಜಿಲ್ಲೆಯ ಕಾಳಗಿ ತಾಲೂಕಿನ ಕಾಳಗಿಯವರು. ತಂದೆ ಗುರುಪಾದಪ್ಪ, ತಾಯಿ ಗುರು ಬಾಯಿ. ಕಾಳಗಿಯಲ್ಲಿ ಎಸ್ ಎಸ್ ಎಲ್ ಸಿ ಹಾಗೂ ನಂತರ ಬಿಎ ಪದವಿವರೆಗೆ ಕಲಬುರಗಿಯಲ್ಲಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಎಂ.ಎ (ಹಿಂದಿ) ಹಾಗೂ ಧಾರವಾಡದ ಕರ್ನಾಟಕ ವಿ.ವಿ.ಯಿಂದ ಎಂ.ಎ (ಕನ್ನಡ) ಪದವಿ ಪಡೆದರು. ಗುಲಬಗಾ ವಿವಿಯಿಂದ (2006) ಪಿಎಚ್ ಡಿ ಪಡೆದರು. ಕನ್ನಡ ಸಾಹಿತ್ಯ ಪರಿಷತ್ ಚಿಂಚೋಳಿ ತಾಲೂಕು (2001-08) ಅಧ್ಯಕ್ಷರಾಗಿ, ಕಲಬುರ್ಗಿ ಜಿಲ್ಲಾ ಕ.ಸಾ.ಪರಿಷತ್ತಿನ ಗೌರವ (2008-12) ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಕಲಬುರಗಿಯ ಶರಣಬಸವೇಶ್ವರ ಮಹಾವಿದ್ಯಾಲಯದಲ್ಲಿ ತಾತ್ಕಾಲಿಕ ...
READ MORE