ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಬರೆದ ’ಅಲ್ಲಮಪ್ರಭು ದೇವರ ವಚನ ನಿರ್ವಚನ’ ಕೃತಿಯು 1998 ರಲ್ಲಿ ಮೊದಲ ಮುದ್ರಣ ಕಂಡಿತ್ತು. ಇದರ 2ನೇ ಭಾಗವು 2001ರಲ್ಲಿ ಮೊದಲು ಮುದ್ರಣಗೊಂಡಿತ್ತು. ಸಮಗ್ರ ಸಂಪುಟ ಶೀರ್ಷಿಕೆಯಡಿ 2001 ಹಾಗೂ 2016ರಲ್ಲಿ ಮತ್ತೆ ಪ್ರಕಟಗೊಳ್ಳುತ್ತಿದೆ. ಅಲ್ಲಮನ ಅಪರೂಪದ ಅನುಭಾವವು ಅವರ ವಚನಗಳಲ್ಲಿ ಸೂರೆಗೊಂಡಿದೆ. ಅಲ್ಲಮನ ಬೆಡಗಿನ ವಚನಗಳನ್ನು ಸ್ವಾಮೀಜಿ ಅವರು ಸರಳವಾಗಿ ಅರ್ಥೈಸಿ, ನಿರೂಪಿಸಿದ್ದಾರೆ. ಇವರ ಬರೆಹದಲ್ಲಿ ಕಾವ್ಯ ಮಾಧುರ್ಯವಿದೆ. ತತ್ವಾನುಭವವೂ ಇದೆ. ಅಲ್ಲಮನ ವಚನಗಳ ಭಾವವನ್ನು ವಿವರಿಸಿರುವ ಕೃತಿ ಇದು.
ಸಿದ್ದೇಶ್ವರ ಸ್ವಾಮಿ ಅವರು ವಿಜಯಪುರ ಜಿಲ್ಲೆಯ ತಿಕೋಟಾ ತಾಲ್ಲೂಕಿನ ಬಿಜ್ಜರಗಿ ಗ್ರಾಮದಲ್ಲಿ 1941 ಅಕ್ಟೋಬರ್ 24 ರಂದು ಜನಿಸಿದರು. ತತ್ವಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಧರರು. 19ನೇ ವಯಸ್ಸಿನಲ್ಲಿಯೇ ತಮ್ಮ ಗುರು ಮಲ್ಲಿಕಾರ್ಜುನ ಸ್ವಾಮಿಗಳು ಮಾಡಿದ ಪ್ರವಚನಗಳನ್ನು ಒಂದುಗೂಡಿಸಿ ‘ಸಿದ್ದಾಂತ ಶಿಖಾಮಣಿ’ ಎಂಬ ಪುಸ್ತಕ ಬರೆದು, ಗುರುಗಳ ಹೆಸರಿನಲ್ಲೇ ಪ್ರಕಟಿಸಿದರು. ಅವರ ಸರಣಿ ಉಪನ್ಯಾಸ ‘ಬದುಕುವದು ಹೇಗೆ, ನಾವು ಹೇಗೆ ಬದುಕಬೇಕು’ ಲಕ್ಷಾಂತರ ಭಾರತೀಯರನ್ನು ತಲುಪಿದೆ. ಭಾರತ ಸರಕಾರ ನೀಡುವ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿ ಆದ ‘ಪದ್ಮಶ್ರೀ’, ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪ್ರಶಸ್ತಿ ಹೀಗೆ ಹತ್ತು ಹಲವು ಪ್ರಶಸ್ತಿಯನ್ನು ...
READ MORE