ಸುಭಾಶ್ಚಂದ್ರ ಕಶೆಟ್ಟಿ, ಬಾಚನಾಳ ಅವರು ರಚಿಸಿದ ಕೃತಿ-ಶರಣರ ದಿವ್ಯವಾಣಿ. 40 ವಚನಗಳನ್ನು ಆಯ್ದುಕೊಂಡು ವಿಶ್ಲೇಷಿಸಲಾಗಿದೆ. ಉತ್ತಮ ನಿದರ್ಶನದೊಂದಿಗೆ ವಚನಗಳ ಅಂತರಾಳವನ್ನು ಬಿಚ್ಚಿಟ್ಟಿದ್ದಾರೆ. ಮೋಳಿಗೆ ಮಾರಯ್ಯನ ವಚನ 'ಊರ್ವಶಿ ಕರ್ಪೂರವನ್ನು' ವಚನದಲ್ಲಿ ಒಳಾರ್ಥವನ್ನು ಭೇದಿಸಿ, ನಿಗೂಢ ವಿಚಾರಗಳನ್ನು ತೆರೆದಿಡುತ್ತಾರೆ. ಹಾಗೆಯೇ 'ನಾ ಹುಟ್ಟಿದಲ್ಲಿ ಸಂಸಾರ ಹುಟ್ಟಿತ್ತು 'ಎಂಬ ವಚನದಲ್ಲಿ ನಾನು ಎಂಬ ಪದದ ವಿಶೇಷ ಅರ್ಥ ಅವರ ಹುಟ್ಟು ಪರಿಣಾಮಗಳನ್ನು ಎಳೆಯಾಗಿ ಬಿಡಿಸಿದ್ದಾರೆ. ಅಕ್ಕನ ವಚನಗಳನ್ನು ಅರ್ಥಮಾಡಿಕೊಳ್ಳಲು ಕೆಲವು ಸಂದರ್ಭದಲ್ಲಿ ಹೆಚ್ಚಿನ ಅಧ್ಯಾತ್ಮಿಕ ಸೂಕ್ಷ್ಮತೆ ಇರಬೇಕು ಆದರೆ, ಲೇಖಕರು ಬಾಳೆಯ ಹಣ್ಣನ್ನು ಸುಲಿದು ಬಾಯಿಗಿತ್ತಂತೆ ಸುಲಭವಾಗಿ ಸತ್ಯ ದರ್ಶನ ಮಾಡಿಸಿದ್ದಾರೆ. ಒಟ್ಟಿನಲ್ಲಿ , ಸರಳ ಭಾಷೆಯಲ್ಲಿ ನಿರೂಪಿಸಿದ್ದು, ಸಾಮಾನ್ಯರೂ ಸಹ ವಚನಗಳ ಅರ್ಥ ಮಾಡಿಕೊಳ್ಳಬಹುದು.
©2024 Book Brahma Private Limited.