ಕವಿ ಹಾಗೂ ಲೇಖಕ ಸುಭಾಷ್ ಚಂದ್ರ ಕಶೆಟ್ಟಿ, ಬಾಚನಾಳ ಅವರು ರಚಿಸಿದ ಕೃತಿ- ಬಸವಣ್ಣನವರ ಆತ್ಮ ಸಂವೇದನೆ. 101 ವಚನಗಳ ಸಂಕ್ಷಿಪ್ತ ವಿಶ್ಲೇಷಣೆ ಒಳಗೊಂಡಿದೆ. ಚಂಚಲ ಮನಸ್ಸು, ಆತ್ಮಸಂವೇದನೆ, ಪರಮಾತ್ಮನ ಅಸ್ತಿತ್ವ,ಮೂಢನಂಬಿಕೆ, ಅಂಧಶ್ರದ್ಧೆ, ಡಾಂಭಿಕತೆ, ಕಾಯಕದ ಕುರಿತು ಜಾಗೃತಿ, ಗುರು-ಲಿಂಗ-ಜಂಗಮ ರಲ್ಲಿ ಭಕ್ತಿಯಿಂದ ದಾಸೋಹ ಸೇವೆ, ಜಾತಿ ಪದ್ಧತಿ ನಿರ್ಮೂಲನೆ, ಸಮಾಜ ಕಟ್ಟುವ ಪರಿಕಲ್ಪನೆ, ದೇವರ ಬಗ್ಗೆ ಅಪಾರ ನಂಬಿಕೆ ಮತ್ತು ಸಜ್ಜನರ ಸಹವಾಸ ಹೀಗೆ ವಸ್ತು ವೈವಿಧ್ಯತೆ ಇದ್ದೂ, ಸೂಕ್ತ ವಿಶ್ಲೇಷಣೆಯನ್ನು ಮಾಡಿದ್ದು ವಿಶೇಷ.
ಲೇಖಕ ಸುಭಾಶ್ಚಂದ್ರ ಕಶೆಟ್ಟಿ ಬಾಚನಾಳ ಅವರು ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಬಾಚನಾಳ ಗ್ರಾಮದವರು. ಹುಟ್ಟೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಕಮಲಾಪುರದಲ್ಲಿ ಪಿಯುಸಿ, ಕಲಬುರಗಿಯಲ್ಲಿ ಪದವಿ ಶಿಕ್ಷಣ ಪೂರೈಸಿದರು. ಸರ್ಕಾರದ ವಿವಿಧ ಇಲಾಖೆಯಲ್ಲಿ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, ನಂತರ ಕಂದಾಯ ಇಲಾಖೆಯಲ್ಲಿ ಶಿರಸ್ತೇದಾರರಾಗಿ (2006) ನಿವೃತ್ತರಾದರು. ಕಮಲಾಪುರ ಸುತ್ತಮುತ್ತಲಿನ ಸಾಧು-ಸಂತರ ಬಗ್ಗೆ, ಜಾನಪದ,ವಚನ ಸಾಹಿತ್ಯ,ನಾಟಕ, ಕವನ, ಜೀವನ ಚರಿತ್ರೆ,ಕುರಿತು 30ಕ್ಕಿಂತ ಹೆಚ್ಚು ಕೃತಿಯನ್ನು ರಚಿಸಿದ್ದಾರೆ. ಕೃತಿಗಳು: ಬದುಕಿನ ಪ್ರಜ್ಞೆ, ಕಾನನದ ಹೂಗಳು, ಸುಗಂಧ ಪುಷ್ಪಗಳು, ಸುಮಂಗಲ ಗೀತೆಗಳು (ಸಂ) ಜೇನುಹನಿ (ಕವನ ಸಂಕಲನ), ನಿತ್ಯಸತ್ಯ (ಚಿಂತನಗಳು), ಜನಮೆಚ್ಚಿದ ನಾಯಕ ಶ್ರೀ ಶಂಕರಶೆಟ್ಟಿ ಪಾಟೀಲರು ...
READ MORE