‘ಶರಣ ಸಂಸ್ಕೃತಿ ಸಂವಾದ’ ಲೇಖಕ ಎಚ್. ಟಿ. ಪೋತೆ ಅವರ ಕೃತಿ. ಇಲ್ಲಿ ಬಸವಾದಿ ಶರಣರ ಕಾಯಕ ಸಂಸ್ಕೃತಿಯ ಸಾಮಾಜಿಕ - ಧಾರ್ಮಿಕ ಹಿನ್ನೆಲೆಯ ಹನ್ನೆರಡು ಲೇಖನಗಳು ಸಂಕಲನಗೊಂಡಿವೆ. ಆ ಕಾಲದ ಶೋಷಿತರು ಮತ್ತು ಕೆಳವರ್ಗದ ವಚನಕಾರರ ಸಾಮಾಜಿಕ, ಸಾಂಸ್ಕೃತಿಕ ಮಹತ್ವವನ್ನು ಅವರ ವಚನಗಳೊಂದಿಗೆ ಚರ್ಚಿಸಿ, ಕಾಯಕದ, ಜಂಗಮತ್ವದ ಹಿರಿಮೆಯನ್ನು ಇಲ್ಲಿನ ಲೇಖನಗಳು ವಿಶ್ಲೇಷಿಸುತ್ತವೆ.
ಪುಸ್ತಕ ಪರಿಚಯ: ಕೃಪೆ- ಹೊಸತು
ಪ್ರಗತಿಪರ ಚಿಂತಕರಾದ ಪೋತೆಯವರು ಜಾನಪದ ಹಾಗೂ ದಲಿತ, ಬಂಡಾಯ ಕ್ಷೇತ್ರದಲ್ಲಿ ಸಾಹಿತ್ಯರಚನೆ ಮಾಡುತ್ತಿದ್ದಾರೆ. ಸಂಶೋಧನೆ, ವಿಚಾರ, ವಿಮರ್ಶೆ, ಅನುವಾದ ಮುಂತಾದ ಪ್ರಕಾರಗಳಲ್ಲಿ ತೊಡಗಿಕೊಂಡು ಕನ್ನಡ ಓದುಗರಿಗೆ ಅನೇಕ ಮೌಲಿಕ ಕೃತಿಗಳನ್ನು ನೀಡಿದ್ದಾರೆ. ಈ ಕೃತಿಯು ಬಸವಾದಿ ಶರಣರ ಕಾಯಕ ಸಂಸ್ಕೃತಿಯ ಸಾಮಾಜಿಕ-ಧಾರ್ಮಿಕ ಹಿನ್ನೆಲೆಯ ಹನ್ನೆರಡು ಲೇಖನ ಗಳನ್ನು ಒಳಗೊಂಡಿದೆ. ಶೋಷಿತರು ಮತ್ತು ಕೆಳವರ್ಗದವರಾದ ದಲಿತ ವಚನಕಾರರ ಸಾಮಾಜಿಕ, ಸಾಂಸ್ಕೃತಿಕ ಮಹತ್ತ್ವವನ್ನು ಅವರ ವಚನಗಳ ಸಾಹಿತ್ಯಕ ಮೌಲ್ಯದೊಂದಿಗೆ ಚರ್ಚಿಸಿ, ಕಾಯಕದ, ಜಂಗಮತ್ವದ ಹಿರಿಮೆಯನ್ನು ಲೇಖಕರು ಎತ್ತಿಹಿಡಿದಿದ್ದಾರೆ. 'ಬಸವಣ್ಣ ನಿರ್ಮಿಸಿದ ಸಮಾಜ', 'ಬುದ್ಧ-ಬಸವರ ಸಾಮಾಜಿಕ ಚಿಂತನೆ', 'ಜಾತಿಪದ್ಧತಿಯ ಕರಾಳ ಮುಖಗಳು', 'ಕೆಳವರ್ಗದ ವಚನಕಾರರು ಕಾಯಕ ಸಂಸ್ಕೃತಿ'
©2024 Book Brahma Private Limited.