‘ಸಂಕೀರ್ಣ ವಚನಸಂಪುಟ ಭಾಗ-2’ ಕೃತಿಯು ಎಸ್. ವಿದ್ಯಾಶಂಕರ ಅವರ ಸಮಗ್ರ ವಚನ ಸಂಪುಟವಾಗಿದೆ. ಕೃತಿಗೆ ಮುನ್ನುಡಿ ಬರೆದಿರುವ ಎಸ್. ಎಂ. ಕೃಷ್ಣ ಅವರು ವಚನವೆಂಬುದು ಸಾಹಿತ್ಯಕ್ಕೆ ಚಳುವಳಿಯಾಗಿದೆ. ಕನ್ನಡ ನಾಡಿನ ಪ್ರಥಮ ಪ್ರಜಾಸಾಹಿತ್ಯವಾಗಿರುವ ವಚನವಾಙ್ಞಯ ನಮ್ಮ ಪರಂಪರೆಯ ಅಪೂರ್ವ ಆಸ್ತಿ ಎನಿಸಿದೆ. ಅನೇಕ ಜನ ವಿದ್ವಾಂಸರು, ಅನೇಕ ಸಂಸ್ಥೆಗಳು, ಇಂತಹ ಸಾಹಿತ್ಯವನ್ನು ಬೆಳಕಿಗೆ ತರಲು ಶ್ರಮಿಸಿದ್ದಾರೆ. ಈ ಸಾಹಿತ್ಯ ದ್ವಿತೀಯ ಆವೃತ್ತಿಯನ್ನು ವಚನ ಪರಿಭಾಷಾಕೋಶವೂ ಒಳಗೊಂಡಂತೆ 15 ಸಂಪುಟಗಳನ್ನು ಮಹತ್ವದ ವಚನ ಗ್ರಂಥವಾಗಿದೆ’ ಎಂದಿದ್ದಾರೆ.
ಇಲ್ಲಿ ಆತ್ಮಕಲ್ಯಾಣದೊಂದಿಗೆ ಸಮಾಜಕಲ್ಯಾಣವನ್ನು ಕಾರ್ಯಗತಗೊಳಿಸಲು ಹೋರಾಡಿ ಮಡಿದಂತಹ ಹುತಾತ್ಮರ ಸಾಹಿತ್ಯವಿದೆ. ರಾಜಸತ್ತೆ, ಪುರೋಹಿತಸತ್ತೆ, ಪುರುಷಸತ್ತೆಗಳೆಂಬ ಪ್ರತಿಗಾಮಿ ಸತ್ತೆಗಳ ವಿರುದ್ಧ, ಕರ್ನಾಟಕದ ಎಲ್ಲಾ ಜನರು ನಡೆಸಿದ ಹೋರಾಟದ ಉಪನಿಷ್ಪತ್ತಿಯಾದ ಈ ಸಾಹಿತ್ಯದಲ್ಲಿ ಜೀವಪರ ಧ್ವನಿಗಳು ದಟ್ಟವಾಗಿ ಕೇಳಿಸುತ್ತವೆ.
©2025 Book Brahma Private Limited.