“ಬಸವನ ಕಂಡಿರಾ 2” ಸುರೇಶ ವಿ. ಸಗರದ ಅವರ ವಚನ ಸಂಕಲನವಾಗಿದೆ. ನೀನೊಂದು ಮಹಾ ಅಣು ಮಹಾ ಶಕ್ತಿ. ನಾನು ಆ ಶಕ್ತಿಯ ಒಂದು ತುಣುಕು. ಮಹಾ ಅಣುವಿನಲ್ಲಿ ಒಂದಾಗಬೇಕಾದರೆ ಭಕ್ತಿ ಬೇಕು ಅರಿವು ಬೇಕು. ಇದನ್ನು ಎನಗೆ ಕರುಣಿಸು ಬಸವಣ್ಣಾ. ಇದೆಲ್ಲಾ ನನ್ನಲ್ಲಿ ಅಳವಟ್ಟಾಗ ನನಗೆ ಬಯಲು ಕಾಣುತ್ತದೆ. ಎಲ್ಲವನ್ನು ಒಳಗೊಂಡು ಕಣ್ಣಿಗೆ ಕಾಣದಿರುವದೆ “ಬಯಲು” ಅಲ್ಲಿ ನಾನಿಲ್ಲ - ನೀನಿಲ್ಲ. ಗಾಳಿಯಲ್ಲಿ ಗಾಳಿ, ನೀಲಾಂಬರದಲ್ಲಿ ಮಿಂಚು ಅಷ್ಟೇ! ಶರಣ ಜೀವಿಗಳಾದ ಸಗರದರವರು ಬಸವ ತತ್ವದ ನಿಜ ಆರಾಧಕರಾಗಿದ್ದಾರೆ. ಅವರ ಬಸವ ತತ್ವಗಳ ಅಧ್ಯಯನ, ನಿಷ್ಠೆ ಮತ್ತು ಬಸವ ತತ್ವ ಜಗದಗಲ - ಮುಗಿಲಗಲ ಹಬ್ಬಲಿ ಎಂಬ ಕಳಕಳಿ ಮೂರು ಮುಪ್ಪರಿಗೊಂಡು ಇಲ್ಲಿನ ವಚನಗಳು ನಮ್ಮನ್ನು ಆಧ್ಯಾತ್ಮ ಲೋಕಕ್ಕೆ ಕೊಂಡೊಯ್ಯುತ್ತವೆ.
©2024 Book Brahma Private Limited.