ಡಾ. ಎಲ್. ಬಸವರಾಜು ಅವರು ಶಿವಶರಣರ ವಚನಗಳನ್ನು ಸಂಪಾದಿಸಿದ್ದು, ಆ ಪೈಕಿ ಅಕ್ಕ ಮಹಾದೇವಿಯ ವಚನಗಳು ಸೇರಿವೆ. ಹೀಗೆ ಸಂಗ್ರಹ ಕೃತಿ ಇದು. ಅಕ್ಕ ಮಹಾದೇವಿಯು ತನ್ನ ವಚನಗಳ ಮೂಲಕ ಅಧ್ಯಾತ್ಮದ ಎತ್ತರವನ್ನು ತೋರಿದವಳು. ಚೆನ್ನಮಲ್ಲಿಕಾರ್ಜುನನೇ ತನ್ನ ಪತಿ ದೇವರೆಂದು ಐಹಿಕ ಸುಖಗಳನ್ನು, ಭೌತಿಕ ಆಸೆಗಳನ್ನು ಹಿಮ್ಮೆಟ್ಟಿಸಿದವಳು. ಮಾತ್ರವಲ್ಲ; ಪರಂಪರಾಗತವಾಗಿ ಬಂದ ಮಹಿಳಾ ದೌರ್ಜನ್ಯ ವಿರುದ್ಧ ಒಂದು ರೀತಿಯಲ್ಲಿ ಕ್ರಾಂತಿಯ ಕಿಡಿಯಾಗಿ ನಿಂತವಳು. ಇಂತಹ, ವಚನಗಳ ಸಂಗ್ರಹವನ್ನು ಒಳಗೊಂಡಿದೆ ಈ ಕೃತಿ.
©2024 Book Brahma Private Limited.