ವಚನ ಮಿಮಾಂಸೆಯ ಬರಹಗಳನ್ನು ಒಳಗೊಂಡ ಕೃತಿ-ಅನಿಯಮ. ಲೇಖಕ ಎಚ್.ಎನ್. ಮುರುಳೀಧರ ಅವರು ರಚಿಸಿದ್ದು, ಉಪಶೀರ್ಷಿಕೆ ಹೇಳುವಂತೆ ವಚನಗಳನ್ನು ವಿಶ್ಲೇಷಣೆಗೆ ಒಳಪಡಿಸಲಾಗಿದೆ. ವಚನಗಳನ್ನು ಹೀಗೆ ವಿಶ್ಲೇಷಿಸಿದ ಹತ್ತು ಹಲವು ಕೃತಿಗಳು ಬಂದಿದ್ದು, ಈ ಕೃತಿಯು ತಮ್ಮದೇ ಆದ ದೃಷ್ಟಿಕೋನದಿಂದ, ವಚನಗಳನ್ನು ಅರ್ಥೈಸಿ, ಅಂದಿನ ಕಾಲಘಟ್ಟದಲ್ಲಿ ಅವು ಪಡೆಯುವ ಅರ್ಥ-ವಿಚಾರ-ಆಚಾರಗಳನ್ನು ವಿವರಿಸಲಾಗಿದೆ.
ಡಾ. ಎಚ್.ಎನ್. ಮುರಳೀಧರ ಅವರು ಬೆಂಗಳೂರಿನ ವಿ.ವಿ.ನ್ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರು. ದಾಸ ಸಾಹಿತ್ಯದ ಅಧ್ಯಯನದಲ್ಲಿ ತೊಡಗಿಸಿಕೊಂಡಿರುವವರು. ಪುರಂದರದಾಸರ ನ್ನು ಕುರಿತ ಇವರ ಕೃತಿ ’ತಂಬೂರಿ ಮೀಟಿದವ ; ಪುರಂದರದಾಸರ ಅಭಿವ್ಯಕ್ತಿಯ ಅಧ್ಯಯನ’ ಈಗಾಗಲೆ ಸಾಕಷ್ಟು ಹೆಸರು ಮಾಡಿದೆ. ’ಈ ಪರಿಯ ಸೊಬಗು’ ಎಂಬ ದಾಸ ಸಾಹಿತ್ಯ ಅಧ್ಯಯನ ಸಂಪುಟವನ್ನು ಹಂಪಿಯ ಕನ್ನಡ ವಿಶ್ವವಿದ್ಯಾಲಯಕ್ಕಾಗಿ ಸಂಪಾದಿಸಿದ್ದಾರೆ. ಹಲವು ಪತ್ರಿಕೆಗಳಲ್ಲಿ ಇವರ ವಿಮರ್ಶಾ ಲೇಖನಗಳು ಪ್ರಕಟವಾಗಿವೆ. ’ಪ್ರತಿಕ್ರಿಯೆ’ ಇವರ ವಿಮರ್ಶಾ ಸಂಕಲನ. ಪ್ರಸ್ತುತ ಉದಯಭಾನು ಉನ್ನತ ಅಧ್ಯಯನ ಕೇಂದ್ರದ ಭಾಷೆ-ಸಾಹಿತ್ಯ-ಸಂಸ್ಕೃತಿ ಅಧ್ಯಯನಾಂಗದ ಗೌರವ ಡೀನ್ ಆಗಿಯೂ ಇವರು ...
READ MORE