ವಚನ ರತ್ನತ್ರಯರು

Author : ಎನ್.ಎಂ. ಗಿರಿಜಾಪತಿ

Pages 72

₹ 160.00




Year of Publication: 2022
Published by: ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು
Address: ಪಂಪ ಮಹಾಕವಿ ರಸ್ತೆ, ಚಾಮರಾಜಪೇಟೆ, ಬೆಂಗಳೂರು 560018\n
Phone: 080- 26612991 / 26623584

Synopsys

ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಾವೇರಿಯಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಬಿಡುಗಡೆಗೊಂಡ ಕೃತಿ ಎನ್. ಎಂ ಗಿರಿಜಾಪತಿ ಅವರ ‘ವಚನ ರತ್ನತ್ರಯರು’. ಶರಣರ ಕುರಿತ ಸಂಕಲನವಾಗಿದೆ. ಈ ಕೃತಿಯು ಸಮಕಾಲೀನ ಚೇತನ- ಬಸವ, ನಿರ್ಮೋಹಿ-ಅಕ್ಕ, ಅಂತಿಮ ಸತ್ಯದರ್ಶಿ- ಅಲ್ಲಮ ಕುರಿತ ವಿಚಾರಗಳನ್ನು ತಿಳಿಸುತ್ತದೆ. ಬಸವಣ್ಣ, ಅಕ್ಕಮಹಾದೇವಿ, ಮತ್ತು ಅಲ್ಲಮಪ್ರಭು ಅವರ ಜೀವನ ಸಾಧನೆ ವಿವರಿಸುವ ಈ ಕೃತಿ ತಾತ್ವಿಕ ಮತ್ತು ಸಾಮಾಜಿಕ ನೆಲೆಗಳನ್ನು ಸಮಯೋಜಿತವಾಗಿ ಅಧ್ಯಯನ ಮಾಡಿದೆ.

About the Author

ಎನ್.ಎಂ. ಗಿರಿಜಾಪತಿ
(17 December 1966)

ಡಾ. ಎನ್.ಎಂ. ಗಿರಿಜಾಪತಿ ಅವರು ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ರಾಮಸಾಗರ ಗ್ರಾಮದಲ್ಲಿ ಡಿಸೆಂಬರ್‌ 17, 1966ರಲ್ಲಿ ಜನಿಸಿದರು. ತಂದೆ ದಿ. ಎನ್. ಎಂ. ಸೋಮಶೇಖರಯ್ಯ ಶಾಸ್ತ್ರಿ, ತಾಯಿ ಶ್ರೀಮತಿ. ವಿಶಾಲಾಕ್ಷಮ್ಮ. ಇವರು ಕನ್ನಡದಲ್ಲಿ ಎಂ.ಎ, ಬಿ.ಈಡಿ ಮತ್ತು ಪಿ.ಹೆಚ್‌.ಡಿ ವ್ಯಾಸಂಗ ಮಾಡಿದ್ದಾರೆ. ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಗಿರಿಜಾಪತಿ ಅವರು ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪದವಿ ಕಾಲೇಜಿನಲ್ಲಿ ಅಧ್ಯಾಪಕರಾಗಿ, ಪ್ರಾಚಾರ್ಯರಾಗಿ ಸೇವೆಸಲ್ಲಿಸಿದ್ದಾರೆ. ಪ್ರಸ್ತುತ ಗುಂಡ್ಲುಪೇಟೆಯಲ್ಲಿರುವ ಜೆ ಎಸ್ ಎಸ್ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿನ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಜೊತೆಗೆ ಪಿಹೆಚ್‌ಡಿ ...

READ MORE

Related Books