ವಿದ್ವಾಂಸ ಡಾ. ಎಲ್. ಬಸವರಾಜು ಅವರು ಸಂಪಾದಿಸಿದ ಕೃತಿ-ಸರಳ ಶೂನ್ಯ ಸಂಪಾದನೆ. ವೀರಶೈವ ಸಿದ್ಧಾಂತ ಇಲ್ಲವೇ ಸಾಹಿತ್ಯದಲ್ಲಿ ಶೂನ್ಯ ಸಂಪಾದನೆಯು ಮಹತ್ವದ ಕೃತಿ. ಗ್ರಂಥವು ಎಡೆಯೂರ ಸಿದ್ದಲಿಂಗೇಶ್ವರರ ಒಂದು ರಚನೆ. ಈ ಗ್ರಂಥವು 12 ನೇ ಶತಮಾನದ ಬಸವಾದಿ ಶರಣರು ಕಲ್ಯಾಣ ನಗರದಲ್ಲಿ ಅನುಭವ ಮಂಟಪದಲ್ಲಿ ಮಾಡಿದ ಅನುಭಾವ ಗೋಷ್ಟಿಯ ಆಗರ. ಬಸವಾದಿ ಶರಣರು ಶೂನ್ಯ ಸಂಪಾದನೆ ಪ್ರತಿಪಾದಿಸಿದರು. ಗಣಿತದ ಸೊನ್ನೆಯಲ್ಲ. ಶೂನ್ಯ ಸಂಪಾದನೆ ಎಂದರೆ ಮೋಕ್ಷ ಸಾಧಿಸುವುದು. ಶರಣರ ಕಾಯಕ ತತ್ವಗಳನ್ನು ಅಳವಡಿಸಿಕೊಂಡು ಜೀವನ ಸಾರ್ಥಕ ಪಡಿಸಿಕೊಳ್ಳುವುದಾಗಿದೆ. ಇಂತಹ ಮಹತ್ವದ ವಿಚಾರಗಳ ಮೊತ್ತವಾಗಿ ಶೂನ್ಯ ಸಂಪಾದನೆ ಇದ್ದು, ಲೇಖಕ ಡಾ. ಎಲ್. ಬಸವರಾಜು ಅವರು ಸಂಪಾದಿಸಿದ್ದಾರೆ.
©2024 Book Brahma Private Limited.