ವಚನ ಸಾಹಿತ್ಯ ಕ್ರಾಂತಿಗೆ ಪ್ರೇರಣೆ ನೀಡಿ, ಬಸವಣ್ಣನ ವ್ಯಕ್ತಿತ್ವ ರೂಪುಗೊಳ್ಳುವಂತೆ ಮಾಡಿದ ಬಸವಣ್ಣನ ವಿದ್ಯಾಭೂಮಿ ಐಕ್ಯಕ್ಷೇತ್ರ ಕೂಡಲಸಂಗಮದ ಮೆರಗು ಕೊರಗಿನ ಕುರಿತು ೨೪ ಲೇಖನಗಳ ಸಂಗ್ರಹ ಕೃತಿಯೇ ಕೂಡಲಸಂಗಮ ಮರೆಗು ಕೊರಗು. ವಚನ ಸಾಹಿತ್ಯದ ಮೂಲಕ ೧೨ನೇ ಶತಮಾನದಲ್ಲಿ ಮೆರಗು ಕಂಡ ಕೂಡಲಸಂಗಮ ಇಂದು ಮೂಲಭೂತ ಸೌಲಭ್ಯಗಳ ಕೊರತೆ ಎದುರಿಸುತ್ತಿದೆ. ಬಸವಾದಿ ಶರಣರ ಆಶಯಗಳಿಗೆ ವಿರುದ್ದವಾಗಿ ನಡೆಯುತ್ತಿರುವ ಕಾರ್ಯಗಳ ಅನಾವರಣವನ್ನು ಈ ಕೃತಿಯಲ್ಲಿ ಮಾಡಲಾಗಿದೆ.
ಲೇಖಕ ಶ್ರೀಧರ ಗೌಡರ ಅವರು ಬಾಗಲಕೋಟೆ ಜಿಲ್ಲೆ ಕೂಡಲಸಂಗಮ ದವರು. 1982 ಜುಲೈ 5 ರಂದು ಜನಿಸಿದರು. ಕೂಡಲಸಂಗಮ, ಚಿಮ್ಮಲಗಿ, ಇಲಕಲ್ಲ, ರಾಯಚೂರಗಳಲ್ಲಿ ವಿದ್ಯಾಬ್ಯಾಸ ಮಾಡಿದ್ದು, ಇತಿಹಾಸ, ಕನ್ನಡ, ರಾಜಶಾಸ್ತ್ರ, ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯಗಳಲ್ಲಿ ಸ್ನಾತಕೋತರ ಪದವಿ, ಬಿಇಡಿ ಪದವಿ ಪಡೆದಿದ್ದಾರೆ. 2013 ಜುಲೈ 12 ರಿಂದ ಬಾಗಲಕೋಟೆ ಜಿಲ್ಲೆ ಹುನಗುಂದ ತಾಲೂಕಿನ ಹಿರೇಓತಗೇರಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಕಲಾ ಶಿಕ್ಷಕರಾಗಿದ್ದು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಮಾನ್ಯತಾ ಕೇಂದ್ರ ಬಿ.ಎಲ್.ಡಿ.ಇ ಸಂಸ್ಥೆಯ ವಚನ ಪಿತಾಮಹ ಡಾ. ಪ.ಗು ಹಳಕಟ್ಟಿ ಸಂಶೋಧನಾ ಕೇಂದ್ರದಿಂದ ತೋಟದಾರ್ಯ ಮಠದ ಸಮಾಜ ಮುಖಿ ಚಳುವಳಿಗಳು : ವಿಶ್ಲೇಷಣಾತ್ಮಕ ...
READ MORE