ಲೇಖಕ ಚಂದ್ರಶೇಖರ ವಸ್ತ್ರದ ಅವರ ಧಾರ್ಮಿಕ ಕೃತಿ ʻಮಾನವತಾವಾದಿ ಬಸವಣ್ಣʼ. ಪುಸ್ತಕವು ತತ್ವಜ್ಞಾನಿ ಹಾಗೂ ಸಾಮಾಜಿಕ ಚಿಂತಕ ಸುಧಾರಕರಾಗಿರುವ ಬಸವಣ್ಣನ ಕುರಿತ ವಿಚಾರಗಳನ್ನು ಹೇಳುತ್ತದೆ. ಹನ್ನೆರಡನೇ ಶತಮಾನದಲ್ಲಿ ನಡೆದಿರುವ ವಚನಕಾರರ ಚಳವಳಿಯ ಸಮಯದಲ್ಲಿ ಜನಿಸಿದ ಇವರು ಲಿಂಗಾಯತ ಧರ್ಮ ಸ್ಥಾಪಿಸುವುದರ ಜೊತೆಗೆ ಜಾತಿಯತೆ, ಅಸಮಾನತೆ, ಲಿಂಗ ಬೇಧ ತಾರತಮ್ಯ, ಸಾಮಾಜಿಕ ಅನ್ಯಾಯ ಸಮಾಜದ ಕೆಟ್ಟ ಮುಖಗಳ ವಿರುದ್ದ ದನಿ ಎತ್ತಿ ಉತ್ತಮ ಸಮಾಜ ನಿರ್ಮಿಸಲು ಎಲ್ಲರನ್ನೂ ಒಗ್ಗೂಡಿಸಿದವರು. ಹೀಗೆ ಮಾನವೀಯ ಮೌಲ್ಯಗಳ ಮೇಲೆ ಬೆಳಕು ಚೆಲ್ಲಿದ ಬಸವಣ್ಣನವರು ‘ಮಾನವತಾವಾದಿ’ಯಾಗಿ ಕಾಣುವ ಕರಿತು ಲೇಖಕರು ಇಲ್ಲಿ ಬರೆಯುತ್ತಾರೆ. ವಚನ ಚಳವಳಿಯ ಮೇಲೆ ವಿಶೇಷ ಅಧ್ಯಯನ ಮಾಡಿ ಈ ಕೃತಿಯನ್ನು ರಚಿಸಿದ್ದಾರೆ.
©2025 Book Brahma Private Limited.