ಬಸವಣ್ಣ ಅವರ 956 ವಚನಗಳ ಪೈಕಿ 108 ವಚನಗಳ ಅರ್ಥ ವಿವರಣೆಯನ್ನು ಕೊಟ್ಟಿರುವುದಾಗಿ ತಿಳಿಸಿರುವ ಲೇಖಕ ಹರ್ಡೇಕರ ಮಂಜಪ್ಪ ಅವರು ಬಸವ ಬೋಧಾಮೃತ ಎಂಬ ಕೃತಿ ರಚಿಸಿದ್ದು, ಪ್ರತಿ ವಚನದ ಅರ್ಥ ವಿವರಣೆ ಮಾಡಿದ್ದಾರೆ. ವಚನಗಳನ್ನು ಅರ್ಥ ಮಾಡಿಕೊಳ್ಳ ಬಯಸುವ ಆಸಕ್ತರಿಗೆ ಇದು ಉಪಯುಕ್ತ ಕೃತಿಯಾಗಿದೆ.
ಹರ್ಡೇಕರ್ ಮಂಜಪ್ಪ ಅವರು (ಜನನ: 18-02-1886) ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿಯಲ್ಲಿ ಜನಿಸಿದರು. ಮುಲ್ಕಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಶಿರಸಿಯಲ್ಲಿ ತಾವು ಕಲಿತ ಶಾಲೆಯಲ್ಲೆ ಶಿಕ್ಷಕರಾದರು. ನಂತರ 1905ರಲ್ಲಿ ಪ್ರತ್ಯೇಕ ಶಾಲೆಯ ಏಕೋಪಾಧ್ಯಾಯರಾದರು. ಮಂಜಪ್ಪನವರು ಕೆಲಸಕ್ಕೆ ರಾಜೀನಾಮೆ ನೀಡಿ ಅಣ್ಣ ಜೊತೆ ದಾವಣಗೆರೆಯಲ್ಲಿ ‘ಧನುರ್ಧಾರಿ’ ಪತ್ರಿಕೆ ಆರಂಭಿಸಿದರು. ಲೋಕಮಾನ್ಯ ಟಿಳಕರು ಕೇಸರಿ ಪತ್ರಿಕೆಯಲ್ಲಿ ಬರೆಯುತ್ತಿದ್ದ ಲೇಖನಗಳನ್ನು ಅನುವಾದಿಸಿ ಪ್ರಕಟಿಸುತ್ತಿದ್ದರು. ಇದನ್ನು ಇಷ್ಟಪಡದ ಮುದ್ರಕರು ನಿರಾಕರಿಸಿದ್ದರಿಂದ ಪತ್ರಿಕೆ ನಿಂತುಹೋಯಿತು. 1908ರಲ್ಲಿ ಸ್ವಂತ ಮುದ್ರಣಯಂತ್ರ ಹೊಂದಿಯೂ ಮತ್ತೆ ಪತ್ರಿಕೆ ಕಾರಣಾಂತರದಿಂದ ಸ್ಥಗಿತಗೊಂಡಿತ್ತು. ರಾಷ್ಟ್ರೀಯತಾವಾದಿಯ ಪ್ರಭಾವದಿಂದ ಬ್ರಹ್ಮಚರ್ಯ ಘೋಷಿಸಿಕೊಂಡು 1911ರಲ್ಲಿ ಟಿಳಕರನ್ನು ಭೇಟಿಯಾದರು. ಹರಿಹರ ರೈಲ್ವೆ ನಿಲ್ದಾಣ ಬಳಿಯ ...
READ MORE