ಸುರಪುರದ ದೊರೆ ವೆಂಕಟಪ್ಪ ನಾಯಕ

Author : ವಸಂತ ಕುಷ್ಟಗಿ

Pages 56

₹ 80.00




Year of Publication: 2011
Published by: ಶ್ರೀಬತ್ತೇರೇಶ ಪ್ರಕಾಶನ
Address: ಎಂ.ಐ.ಜಿ.26, ಆದರ್ಶನಗರ, ಮೊದಲನೆ ಹಂತ, ಗುಲಬರ್ಗಾ-585105

Synopsys

‘ಸುರಪುರದ ದೊರೆ ವೆಂಕಟಪ್ಪ ನಾಯಕ’ ಡಾ. ವಸಂತ ಕುಷ್ಟಗಿ ಅವರ ಕೃತಿ. ಸುರಪುರದ ದೊರೆ ವೆಂಕಟಪ್ಪನಾಯಕನ ಬದುಕಿನ ಹೋರಾಟದ ಚಿತ್ರಣವಿದೆ. ವೆಂಕಟಪ್ಪನಾಯಕನ ಸ್ವಾಭಿಮಾನ, ದೇಶಾಭಿಮಾನ, ಎದೆಗಾರಿಕೆ, ಪೌರುಷತನ ಎಲ್ಲವನ್ನೂ ಚಿತ್ರಿಸಲಾಗಿದೆ. 

ವೆಂಕಟಪ್ಪ ನಾಯಕ ಬ್ರಿಟಿಷರ ವಿರುದ್ಧ ಹೊತ್ತಿಸಿದ ಕ್ರಾಂತಿಯ ಕಿಡಿ ಇನ್ನುಳಿದ ಸಂಸ್ಥಾನಗಳ ಅರಸರಿಗೆ ಪ್ರೇರಣೆಯಾಗಿ ಇಡೀ ಭಾರತದ ಸ್ವಾತಂತ್ರ್ಯ ಸಂಗ್ರಾಮಕ್ಕೆ ಪ್ರಮುಖವೆನಿಸುತ್ತದೆ. ಬ್ರಿಟಿಷರ ವಿರುದ್ಧ ವೆಂಕಟಪ್ಪನಾಯಕ ಸೋತರೂ, ಪ್ರಾಣತೆತ್ತರೂ ಅವರ ಸ್ವಾಭಿಮಾನ, ಅವರ ಎದೆಗಾರಿಕೆ ಆತನ ಗುರಿ ಜಯ ಪಡೆಯುತ್ತದೆ. ಕುತೂಹಲದ ತುದಿಗೆ ತಂದು ಕೂರಿಸುವ ಪುಸ್ತಕವು ಓದಿಸಿಕೊಳ್ಳುತ್ತದೆ.

 

About the Author

ವಸಂತ ಕುಷ್ಟಗಿ
(10 October 1936)

ಸದ್ಯ ಕಲಬುರ್ಗಿ ನಿವಾಸಿಯಾಗಿರುವ ಕವಿ ವಸಂತ ಕುಷ್ಟಗಿ ಅವರು ಮೂಲತಃ ಹಿಂದಿನ ರಾಯಚೂರು ಜಿಲ್ಲೆ ಕುಷ್ಟಗಿಯವರು. ವಸಂತ ಕುಷ್ಟಗಿ ಅವರು ಜನಿಸಿದ್ದು 1936 ಅಕ್ಟೋಬರ್ 10ರಂದು. ವೃತ್ತಿಯಲ್ಲಿ ಪ್ರಾಧ್ಯಾಪಕರಾಗಿದ್ದ ಅವರು ಪ್ರವೃತ್ತಿಯಿಂದ ಕವಿ-ಲೇಖಕ. ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದಿಂದ ಎಂ.ಎ ಪದವಿ ಪಡೆದ ನಂತರ ಅವರು ಬೀದರಿನ ಬಿ.ವಿ. ಭೂಮರೆಡ್ಡಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ವೃತ್ತಿ ಆರಂಭಿಸಿದರು. ನಂತರ ಕಲಬುರ್ಗಿಯ ಎಂ.ಎಸ್.ಐ ಹಾಗೂ ಎನ್‌.ವಿ. ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಹಾಗೂ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. ನಿವೃತ್ತಿ ನಂತರ ಸ್ವಾಮಿ ರಮಾನಂದ ತೀರ್ಥ ಸಂಶೋಧನಾ ಸಂಸ್ಥೆಯ ಗೌರವ ನಿರ್ದೇಶಕರಾಗಿದ್ದಾರೆ. ಅವರಿಗೆ ಕಡೆಂಗೋಡ್ಲು ...

READ MORE

Related Books