ಸೋಲಿನ ನೆಪವೇಕೆ ಗೆಲುವಿನ ಜಪವಿರಲಿ

Author : ಸಂತೋಷ್ ರಾವ್ ಪೆರ್ಮುಡ

Pages 144

₹ 150.00




Year of Publication: 2022
Published by: ಗೋಮಿನಿ ಪ್ರಕಾಶನ
Address: ಶ್ರೀ ವೀರಭದ್ರ ಸ್ವಾಮಿ ನಿಲಯ, 1ನೇ ಮುಖ್ಯರಸ್ತೆ,3ನೇ ಅಡ್ಡರಸ್ತೆ, ವಿಶ್ವಣ್ಣ ಲೇಔಟ್, ಶಾಂತಿನಗರ, ತುಮಕೂರು-572102
Phone: 8073007475

Synopsys

ಸೋಲಿನ ನೆಪವೇಕೆ ಗೆಲುವಿನ ಜಪವಿರಲಿ ಸಂತೋಷ್‌ ರಾವ್‌ ಪೆರ್ಮುಡ ಅವರ ಕೃತಿಯಾಗಿದೆ. ಈ ಸೃಷ್ಟಿಯಲ್ಲಿ ಪ್ರತಿಯೊಂದು ವಸ್ತುವೂ, ಜೀವಿಯೂ ಭಿನ್ನವಾಗಿವೆ. ಅದರಲ್ಲೂ ಮನುಷ್ಯನೆಂಬ ಜೀವಿಯಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ವಿಭಿನ್ನ ಸೃಷ್ಟಿಯೇ ಸರಿ! ಪ್ರತಿಯೊಬ್ಬ ವ್ಯಕ್ತಿಯೂ ದೈಹಿಕವಾಗಿ, ಮಾನಸಿಕವಾಗಿ ತನ್ನದೇ ಆದ ವ್ಯಕ್ತಿತ್ವವನ್ನು ಹೊಂದಿರುತ್ತಾನೆ. ಪ್ರತಿಯೊಬ್ಬರಿಗೂ ಅವರದೇ ಆದ ಶಕ್ತಿ-ಯುಕ್ತಿಗಳು ಇರುತ್ತವೆ. ಜೊತೆಗೆ ಇತಿ-ಮಿತಿಗಳು ಕೂಡ. ಅದೃಷ್ಟಕ್ಕೆ ಮಾನವನಿಗೆ ತನ್ನ ಶಕ್ತಿಯುಕ್ತಿಗಳನ್ನು ಸಾಣೆ ಹಿಡಿಯಲು, ಇತಿಮಿತಿಗಳನ್ನು ಮೀರಲು ಬಹಳಷ್ಟು ಅವಕಾಶಗಳಿವೆ. ಅಂತಹ ಅವಕಾಶಗಳಲ್ಲಿ ಪ್ರಮುಖವಾದುದು ಪುಸ್ತಕಗಳ ಓದು. ಈ ನಿಟ್ಟಿನಲ್ಲಿ ಸಂತೋಷ್ ರಾವ್ ಪೆರ್ಮುಡ ಅವರ “ಸೋಲಿನ ನೆಪವೇಕೆ, ಗೆಲುವಿನ ಜಪವಿರಲಿ" ಪುಸ್ತಕವನ್ನು ಇಂತಹ ಪುಸ್ತಕಗಳ ಸಾಲಿಗೆ ಸೇರಿಸಿಕೊಳ್ಳಬಹುದಾಗಿದೆ. ಈಗಾಗಲೇ ವ್ಯಕ್ತಿತ್ವ ವಿಕಸನ ಪ್ರಕಾರದ ಸಾಹಿತ್ಯ ಕೃಷಿಯಲ್ಲಿ ಸಿದ್ಧಹಸ್ತರಾಗಿರುವ ಸಂತೋಷ್ ಅವರ ಈ ಪುಸ್ತಕದ ಲೇಖನಗಳು ಹಲವು ವ್ಯಕ್ತಿಗಳ ನಾಡಿಗಳನ್ನು ಹಿಡಿದು ಬರೆದಿರುವಂತಿವೆ. ಪ್ರತಿಯೊಬ್ಬರ ವ್ಯಕ್ತಿತ್ವ ವಿಕಸನಕ್ಕೆ ಈ ಸಂಕಲನದ ಲೇಖನಗಳು ನೆರವಾಗಬಲ್ಲವು, ತಮ್ಮ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಇಚ್ಚಿಸುವವರಿಗೂ ಇದು ಉಪಯುಕ್ತವಾಗಬಲ್ಲ ಪುಸ್ತಕ, ತಮ್ಮ ಬರವಣಿಗೆಯ ಮೂಲಕ ವ್ಯಕ್ತಿತ್ವ ವಿಕಸನಕ್ಕೆ, ಕೌಶಲ್ಯಾಭಿವೃದ್ಧಿಗೆ ನೆರವಾಗಬಲ್ಲದು ಎಂದು ಗುಬ್ಬಚ್ಚಿ ಸತೀಶ್ ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಲಾಗಿದೆ.

About the Author

ಸಂತೋಷ್ ರಾವ್ ಪೆರ್ಮುಡ
(26 March 1983)

 ದ.ಕ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪಟ್ರಮೆ ಬಳಿಯ ಪೆರ್ಮುಡದ ಸಂತೋಷರಾವ್ ಎಂ.ಕಾಂ. ಪದವೀಧರರು. ಧಾರವಾಡದಲ್ಲಿ ತರಬೇತಿ ಸಂಸ್ಥೆಯೊಂದರ ಪ್ರಾಂಶುಪಾಲರು. ರಾಜ್ಯದ ವಿವಿಧ ಪತ್ರಿಕೆಗಳಿಗೆ ವಿಶೇಷವಾಗಿ ಪ್ರೇರಣಾತ್ಮಕ ಲೇಖನಗಳನ್ನು ಪ್ರಕಟಗೊಂಡಿವೆ. ವ್ಯಕ್ತಿತ್ವ ವಿಕಸನ ಮತ್ತು ಉತ್ಕೃಷ್ಟ ಜೀವನ ಶೈಲಿಗೆ ಸಂಬಂಧಿಸಿದ ಲೇಖನಗಳನ್ನು ತಮ್ಮದೇ ಆದ ಪರಿವರ್ತನಾ ಎನ್ನುವ ಪುಟದಲ್ಲಿ ಬರೆಯುತ್ತಿದ್ದಾರೆ. ಕೃತಿಗಳು : ಗೆಲುವೇ ಜೀವನದ ಸಾಕ್ಷಾತ್ಕಾರ, ಪರ್ಯಟನೆ (ಪ್ರವಾಸ ಕಥನ), ದಿಕ್ಸೂಚಿ (ವ್ಯಕ್ತಿತ್ವ ವಿಕಸನ) ಇವರ ಕೃತಿಗಳು. ...

READ MORE

Related Books