ಹಿರಿಯ ಚಿಂತಕ, ಮಂಕುತಿಮ್ಮನ ಕಗ್ಗ ಖ್ಯಾತಿಯ ಬರಹಗಾರ ಡಿ.ವಿ. ಗುಂಡಪ್ಪ (ಡಿ.ವಿ.ಜಿ) ಅವರ ನಾಟಕ ಕೃತಿ-ಶ್ರೀ ವಿಜಯನಗರ ಸ್ಥಾಪನೆಯಲ್ಲಿ ಘಟಿಸಿದ ಐತಿಹಾಸಿಕ ಮಹತ್ವದ ವಿಚಾರ-ಸಂಗತಿಗಳನ್ನು ಖ್ಯಾತ ಸಾಹಿತಿ ಡಿ.ವಿ.ಜಿ ಅವರು ದಾಖಲಿಸಿದ ನಾಟಕವಿದು. ಮಾಧವ (ವಿದ್ಯಾರಣ್ಯ) ಚಿಂತೆ, ಸಾಯಣನ ಚಿಂತೆ, ಮಾಧವನ ತೀರ್ಥಯಾತ್ರೆ, ಮಾಧವ ಭಟ್ಟರ ಹೊಸ ಆಶ್ರಮ ನಾಮಗಳು, ವಿದ್ಯಾರಣ್ಯ-ಹರಿಹರರ ಸಂಭಾಷಣೆ, ಹರಿಹರನ ಪುತ್ರ ವಿಯೋಗ, ಬುಕ್ಕರಾಜನ ಮಹಮ್ಮದೀಯ ಮೈತ್ರಿ, ಬುಕ್ಕರಾಜನ ಬೇಸರ ಹೀಗೆ ವಿವಿಧ ಅಂಕಗಳ ಮೂಲಕ ಇಡೀ ವಿಜಯನಗರ ಸ್ಥಾಪನೆಯ ಸಮಗ್ರ ಚಿತ್ರಣ ನೀಡಿರುವ ನಾಟಕವಿದು. ಈ ಕೃತಿಯು ಹಲವಾರು ಆವೃತ್ತಿಗಳಲ್ಲಿ ಮುದ್ರಿತಗೊಂಡಿದೆ. ಬೆಂಗಳೂರಿನ ಕರ್ಣಾಟಕ ಪ್ರಕಟನಾಲಯವು 1928ರಲ್ಲಿ ಮೊದಲ ಬಾರಿಗೆ ಈ ಕೃತಿಯನ್ನು ಪ್ರಕಟಿಸಿತ್ತು.
©2024 Book Brahma Private Limited.