‘ಸರ್ವಜ್ಞನ ವಚನಗಳು’ ಕೃತಿಯು ಸರ್ವಜ್ಞನ ಕುರಿತು ಬಂದಿರುವ ಅಧಿಕೃತ ಕೃತಿಯಾಗಿದೆ. ಇಲ್ಲಿ ವಚನಗಳ ಸಂಗ್ರಹ ಮಾತ್ರವಲ್ಲದೆ ಅಧ್ಯಯನಪೂರ್ಣ ಪೀಠಿಕೆಯನ್ನು ಕೂಡ ಚನ್ನಪ್ಪ ಉತ್ತಂಗಿಯವರು ಬರೆದಿದ್ದಾರೆ. ಈ ಹೊಸ ಆವೃತ್ತಿಯಲ್ಲಿ ಸರ್ವಜ್ಞನ 2100 ವಚನಗಳನ್ನು ಕಾಣಬಹುದು. ಕೃತಿಯಲ್ಲಿರುವ ಸರ್ವಜ್ಞನ ವಚನವೊಂದು ಹೀಗಿದೆ; ಆದಿ ಗುರುರಾಯನು ಭೇದಿಸಿ ಲಿಂಗವಕೊಟ್ಟ ಮೂಜಗದ ಕರ್ತನೇ ಆದಿ ಗುರುಬಸವ ಸರ್ವಜ್ಞ ಹರನೆ ಗುರುವಾಗಿ ತಾಮೃರ್ತ್ಯಲೋಕಕೆ ಬಂದು ಪರಶಿವಲಿಂಗವನು ಕರಕೆ ತಂದು ಕೊಟ್ಟ ಗುರುವೆ ಬಸವಣ್ಣ ಸರ್ವಜ್ಞ ಆಗಿಲ್ಲ ಹೋಗಿಲ್ಲ ಮೇಗಿಲ್ಲ ಕೆಳಗಿಲ್ಲ ತಾಗಿಲ್ಲ ತಪ್ಪು ತಡೆ ಇಲ್ಲ ಲಿಂಗಕ್ಕೆ ದೇಗುಲವೇ ಇಲ್ಲ ಸರ್ವಜ್ಞ
©2024 Book Brahma Private Limited.