ಉತ್ತಂಗಿ ಚೆನ್ನಪ್ಪ ಅವರ ಕಾವ್ಯನಾಮ ತಿರುಳು ಗನ್ನಡದ ತಿರುಕ. ಹದಿನೆಂಟನೆ ಶತಮಾನದ ಮಧ್ಯಭಾಗದಲ್ಲಿ. ಸ್ವಾತಂತ್ರ್ಯ ಪೂರ್ವದ ಬ್ರಿಟಿಷರ ಆಡಳಿತದ ಕಾಲದಲ್ಲಿ ಕ್ರೈಸ್ತಧರ್ಮಾನುಯಾಯಿಗಳಾದ ರೆವರೆಂಡ್ ಕಿಟಲ್, ಬಿ.ಎಲ್ ರೈಸ್ ಮೊದಲಾದವರಿಂದ ಕನ್ನಡದಲ್ಲಿ ಕೆಲಸ ಆರಂಭವಾಯಿತು. ಅದೇ ಪರಂಪರೆಯನ್ನು ಮುಂದುವರಿಸಿ ಕನ್ನಡದ ಜನಪದದಲ್ಲಿ ಶಿವಶರಣರ ವಚನಗಳನ್ನು ಅದರಲ್ಲೂ ನಾಡಿನ ಜನರ ನಾಲಗೆಯ ಮೇಲೆ ನಲಿದಾಡುವ ತ್ರಿಪದಿಗಳನ್ನು ರಚಿಸಿದ ಸರ್ವಜ್ಞ ಕವಿಯ ಸಂಪೂರ್ಣ ಪರಿಚಯ ಮಾಡಿಕೊಟ್ಟವರಲ್ಲಿ ಪ್ರಮುಖರು ರೆವೆರೆಂಡ್ ಉತ್ತಂಗಿ ಚೆನ್ನಪ್ಪ.
ಇವರು ಭಾರತೀಯರು. ಧರ್ಮಪ್ರಚಾರ ಅವರ ವೃತ್ತಿಯಾದರೂ ಪ್ರವೃತ್ತಿಯಿಂದ ಕನ್ನಡದ ಕಟ್ಟಾಳು. ನಾಡಿಗರ ನಾಲಿಗೆಯ ಮೇಲೆ ನೆಲಸಿದ್ದ , ಪಂಡಿತ ಪಾಮರರ ಪ್ರೀತಿಗೆ ಒಳಗಾಗಿದ್ದ ಸರ್ವಜ್ಞನ ವಚನಗಳಿಗೆ ಒಂದು ವ್ಯವಸ್ಥಿತ ರೂಪಕೊಟ್ಟು ವಚನ ಸಂಗ್ರಹವನ್ನು ಹೊರ ತಂದರು. ಬನಾರಸಕ್ಕೆ ಬೆತ್ಲೇಹೇಮಿನ ವಿನಂತಿ, ಹಿಂದೂ ಸಮಾಜದ ಹಿತ ಚಿಂತಕ, ಮಕ್ಕಳ ಶಿಕ್ಣಪಟ, ರೆವರೆಂಡ್ ನಾರಾಯಣ ವಾಮನ ತಿಲಕ, ಮೃತ್ಯುಂಜಯ, ಮೋಳಿಗೆಯ ಮಾರಯ್ಯ ಮುಂತಾದ ಕೃತಿಗಳನ್ನು ರಚಿಸಿದ್ದಾರೆ. ಅವರ ಸಿದ್ದರಾಮ ಸಾಹಿತ್ಯ ಸಂಗ್ರಹ ಕೃತಿಗೆ ಮೈಸೂರು ಸರ್ಕಾರ ದೇವರಜ ಬಹದ್ದೂರ್ ಬಹುಮಾನ ನೀಡಿ ಗೌರವಿಸಿದೆ.