ನೀವೂ ಸ್ಟಾರ್ ಆಗಿ

Author : ಆರ್. ಬಿ. ಗುರುಬಸವರಾಜ

Pages 120

₹ 100.00




Published by: ದಲಾಯತ್ ಸುಭಾನ್ ಸಾಹೇಬ್ ವೆಲ್‌ಫೇರ್ ಆ್ಯಂಡ್ ಎಜುಕೇಶನ್ ಟ್ರಸ್ಟ್, ಬಳ್ಳಾರಿ
Phone: 9900717229

Synopsys

ಆರ್. ಬಿ. ಗುರುಬಸವರಾಜ ಅವರು ಬರೆದಿರುವ ವ್ಯಕ್ತಿತ್ವ ವಿಕಸನ ಕೃತಿಯಾಗಿದೆ ಇದು. ಸ್ವತಃ ಶಿಕ್ಷಕರಾಗಿರುವ ಲೇಖಕರು, ವಿದ್ಯಾರ್ಥಿಗಳಿಗೂ, ಶಿಕ್ಷಕರಿಗೂ ಮಾರ್ಗದರ್ಶನವಾಗುವಂತೆ, ಅತ್ಯಂತ ಸರಳವಾಗಿ, ನೇರವಾಗಿ ಬರೆದಿದ್ದಾರೆ. ಮುನ್ನುಡಿ ಹೇಳುವಂತೆ ಇವು ಬರೀ ಶೈಕ್ಷಣಿಕ ಲೇಖನಗಳಲ್ಲ. ಮಕ್ಕಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗುವಂತಹ ಪ್ರಾಯೋಗಿಕ ಅಂಶಗಳು ಇಲ್ಲಿವೆ. ಮಕ್ಕಳು, ಶಿಕ್ಷಕರು ಹಾಗೂ ಪೋಷಕರು ಸೇರಿದಂತೆ ಎಲ್ಲರೂ ಅನುಸರಿಸಬೇಕಾದ ಮಾರ್ಗ ಸೂಚಿಗಳನ್ನು ಇಲ್ಲಿನ ಲೇಖನಗಳು ಉದಾಹರಣೆ ಸಮೇತ ವಿವರಿಸುತ್ತವೆ.  ಶಾಲೆಯನ್ನು ಪ್ರಯೋಗ ಶಾಲೆಯಾಗಿಸಿ ತಾವು ಅನುಷ್ಠಾನಗೊಳಿಸಿದ ಅಂಶಗಳನ್ನು ಇಲ್ಲಿ ನೀಡಿದ್ದಾರೆ. ಅವರ ವ್ಯಕ್ತಿತ್ವಗಳ ನಾನಾ ರಾಜಕೀಯ ಕಾರಣಗಳಿಗಾಗಿ ಸಂಕುಚಿತಗೊಳ್ಳುತ್ತಿವೆ. ಅಂತಹ ಶಿಕ್ಷಕರು, ತಮ್ಮ ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ಹೇಗೆ ವಿಕಸನಗೊಳಿಸಬಲ್ಲರು? ಈ ಹಿನ್ನೆಲೆಯಲ್ಲಿ ಈ ಕಿರು ಕೃತಿ, ಶಿಕ್ಷಕರಿಗೆ ಒಂದು ಪ್ರಾಥಮಿಕ ಕೈಪಿಡಿಯಾಗಿದೆ.

About the Author

ಆರ್. ಬಿ. ಗುರುಬಸವರಾಜ
(20 July 1974)

ವೃತ್ತಿಯಲ್ಲಿ ಶಿಕ್ಷಕರಾಗಿರುವ ಆರ್.ಬಿ.ಗುರುಬಸವರಾಜ್, ಪ್ರವೃತ್ತಿಯಲ್ಲಿ ಲೇಖಕರು ಹೌದು. ಶಿಕ್ಷಣ, ವಿದ್ಯಾರ್ಥಿಗಳ ವೈಜ್ಞಾನಿಕ ಮನೋವಿಜ್ಞಾನಕ್ಕೆ ಸಂಬಂಧಿಸಿದಂತೆ ಇವರು ಬರೆದಿರುವ ಹಲವಾರು ಲೇಖನಗಳು ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಶಿಕ್ಷಣ ಲೇಖನಗಳ ಸಂಗ್ರಹ "ನೀವೂ ಸ್ಟಾರ್ ಆಗಿ", ಶಿಕ್ಷಕರ ಕೈಪಿಡಿ "ಯೋಚನೆ ಬಿಡಿ ಯೋಜನೆ ಮಾಡಿ", ಮಕ್ಕಳ ಕಿರುಕಾದಂಬರಿ "ಪಾಪ್ ಕಾರ್ನ್ ಪಾಪಜ್ಜಿ" ಸಂಪಾದಿತ ಕೃತಿ "ನೆಲದ ಮರೆಯ ನಿಧಾನ" ಎಂಬ ನಾಲ್ಕು ಪುಸ್ತಕಗಳು ಪ್ರಕಟವಾಗಿವೆ. ...

READ MORE

Related Books