`ಮನಸ್ಸೇ ರಿಲ್ಯಾಕ್ಸ್ ಪ್ಲೀಸ್ !' ವ್ಯಕ್ತಿತ್ವ ವಿಕಸನ ಬರಹಗಳ ಪುಸ್ತಕವಿದು. ಲೇಖಕ ಸ್ವಾಮಿ ಸುಖಬೋಧಾನಂದ ಅವರು ರಚಿಸಿದ್ದಾರೆ. ದೈನಂದಿನ ಬದುಕಿನಲ್ಲಿ ಅಶಾಂತಿಗೆ ಹಲವೊಮ್ಮೆ ಕಾರಣವಾಗುವ ಹಾಗೂ ಹೊರಗಿನಿಂದ ಬಂದೊದಗುವ ಆಘಾತಗಳಿಗೆ ನಾವು ವಿಚಲಿತರಾಗದಿರುವುದೇ ಉತ್ಕರ್ಷದ ಹಾದಿ. ಇದು ಸ್ವ-ಶಿಕ್ಷಣದಿಂದ ಸಾಧ್ಯ- ಎಂಬುದು ಸ್ವಾಮಿ ಸುಖಬೋಧಾನಂದರ ಅನುಭವಾಧಾರಿತ ಮಂಡನೆ. ಮನಸ್ಸಿನ ಸ್ವಾಸ್ಥ್ಯವನ್ನು ಉಳಿಸಿಕೊಳ್ಳಲು ಕಲಿತರೆ ಬದುಕು ಹೆಚ್ಚು ಸಹ್ಯವಾಗುತ್ತದೆ. ಈ ಮನೋವಿಕಾಸ ತಂತ್ರವನ್ನು ಸರಳವಾಗಿ, ಆಕರ್ಷಕವಾಗಿ ತಿಳಿಸುವ ಕೈಪಿಡಿ- ’ಮನಸ್ಸೇ ರಿಲ್ಯಾಕ್ಸ್ ಪ್ಲೀಸ್!’ ಹತ್ತಾರು ದೃಷ್ಟಾಂತಗಳ ಮತ್ತು ನೈಜ ಜೀವನ ಘಟನೆಗಳ ಆಧಾರದಿಂದ ಈ ಪುಸ್ತಕ ಮೂಡಿಬಂದಿದೆ ಎಂದು ಪುಸ್ತಕದ ಕುರಿತಾಗಿ ಇಲ್ಲಿ ವಿವರಿಸಲಾಗಿದೆ.
©2024 Book Brahma Private Limited.